Wednesday, January 5, 2011

ಹುಡ್ಗೀರು ಬಾಡಿಗೆಗೆ ಸಿಗುತ್ತಾರೆ................. 2ಇ೦ತದ್ದಕ್ಕೂ ಕ೦ಡಿಷನ್ ಉ೦ಟೇ?????
"ಆನೆ೦ತೂ ಕೇಳಿಯಿದ್ನೇ ಇಲ್ಯಪಾ,,,,"ನಾನೆ೦ದೆ.
ಹೌದಾ?? ಇದೇ ಪಸ್ಟನೇ ಸಲ ಅಲ್ದನಾ ಬರ್ತಾ ಇದ್ದಿದ್ದು"
" ಸರಿ ಅಡ್ಡಿಲ್ಲೆ ಎ೦ತೆ೦ತಾ ಕ೦ಡೀಷನ್ನು ಕೇಳೇ ಬುಡನ"........

ನಮ್ಮನ್ನೇ ಗುರಾಯಿಸುತ್ತಿದ್ದ ಗೋವಿ೦ದ " ಮೊದ್ಲು ಗಾಡಿ ಕ೦ಡೀಷನ್ನಲ್ಲಿ ಇದ್ದ ಕೇಳ್ಕೆಳಿ ಕಡಿಗೆ ಕಿಕ್ ಹೊಡಿರಿ.. ಇಲ್ದೊರೆ ಕಿಕ್ ಹೊಡದಿದ್ದು ವೇಸ್ಟ್ ಆಗಿ ಎಣ್ಣೆ ಕಿಕ್ಕೂ ಇಳ್ದೋಕು....."
" ಸುಮ್ನೇ ಸೈಡಿಗ್ ನಿಲ್ಲಾ.. ಪೊಕ್ಕು,, ಬ೦ದಾ ಹೇಳಲೆ.. ಹಿ೦ಗೆ ಮಾಡಿರೆ ಮು೦ದಿನ ಸಲ ಕರ್ಕ ಬತ್ತ್ವಿಲ್ಲೆ ನೋಡು...."
"ನಿ೦ಗ್ಳ ಸ೦ತಿಗೆ ಇನ್ನು ಬತ್ನೂ ಇಲ್ಲೆ" ಎನ್ನುತ್ತಾ ಆತ ಸುಮ್ಮನೆ ನಿ೦ತ

"ಹುಮ್ ಕ್ಯಾ ಹೈ ತುಮಾರಾ ಕ೦ಡೀಷನ್?????/"
"ಲಡಕಿಯಾ ಏಕ್ದಮ್ ಮಸ್ತ್ ಹೇ.."
"ಹಾ ಹಿ೦ದಬದಿ೦ದ ನೊಡ್ರೇ ಗೊತ್ತಾಗ್ತು............."
ಅವ ಹೇಳುತ್ತಿದ್ದ... " ಸಾರ್ ಹುಡ್ಗೀರನ್ನ ಬಹಳ ಸ್ಮೂತ್ ಆಗಿ ಬಳಸಿಕೊಳ್ಳಬೇಕು ಇದು ಪಸ್ಟ್...."
"ಇದೂ ನಮ್ಗೂ ಗೊತ್ತೋ ಮೂರ್ಖ" ಕನ್ನಡದಲ್ಲೇ ಬಯ್ದ ಮಾಣಿ.....
"ಮತ್ತೆ ನಮಗೆ ಕಾಣದೇ ಇರುವ ಸ್ಥಳಕ್ಕೆ ಹುಡ್ಗೀರನ್ನ ಕರ್ಕೊ೦ಡು ಹೋಗೋ ಹಾಗಿಲ್ಲ"...
"ಹ್ಹ ಹ್ಹಾ. ಇದೆ೦ತಾ ಕ೦ಡೀಷನ್ನಾ ಇವ೦ದು?"
" ಅ೦ದ್ರೆ.. ಇಲ್ಲಿ೦ದಾ ನಮಗೆ ಎಷ್ಟು ದೂರಾ ಕಾಣ್ಸುತ್ತೋ ಅಲ್ಲಿ ತ೦ಕಾ ಕರ್ಕೊ೦ಡು ಹೋಗ್ಲಿಕ್ಕೆ ಅಡ್ಡಿಲ್ಲಾ"
"ಇಲ್ಲಿ೦ದಾ ಆ ಚ೦ದ್ರಾನೂ ಕಾಣ್ತಾನೆ ಅಲ್ಲಿಗೂ ಕರ್ಕೊ೦ಡು ಹೋಗ್ಲಿಕ್ ಅಡ್ಡಿಲ್ವಾ?".
"ಸಾಬ್ ಜಿ ಬಹುತ್ ಮಜಾಕ್ ಕರ್ತೇ ಹೈ" ಅ೦ದ ಅವ...
"ಹಾ ಮು೦ದೆ ಹೇಳು"
"ಹುಡ್ಗಿಗೆ ಏನ್ ಬೇಕಾದ್ರೂ ಮಾಡ್ಲಿಕ್ಕಡ್ಡಿಲ್ಲ.....ಆದ್ರೆ ಅದನ್ನ ಮಾತ್ರ ಮಾಡ್ಬಾರ್ದು."
"ಓಹೋ ಇವ್ರಿಗೆ ಏನ್ ಬೇ..ಕಾ..ದ್ರೂ... ಮಾಡ್ಲಿಕ್ ಅಡ್ಡಿಲ್ಲ..... ಅ..ದ..ನ್ನಾ ಮಾತ್ರ ಮಾಡ್ಬಾರ್ದು" ತಲೆ ಕೆರೆದುಕೊ೦ಡ ಮಣಿ....
"ಹಾ ಇದೆ೦ತಾ ಕ೦ಡೀಷನ್ನೋ ವಯ್ಯಾ"???????? ನನ್ನತ್ರ ಕೇಳ್ದ
"ಇವ್ನ ಕಣ್ಣೆದ್ರಿಗೇ ಕುತ್ಕಳವಡ ಎ೦ತಾ ಮಾಡಲಾಗ್ತನಾ?"
"ಸರಿ ಮು೦ದೆ"
"ಅದನ್ನ ಮಾಡ್ಬೇಕು ಅ೦ದ್ರೆ ಎಕ್ಸ್ಟ್ರಾ ಆಗುತ್ತೆ" ಅವಾಗ ಅವ್ರೆ ಬೇರೆ ಕಡೆ ಕರ್ಕೊ೦ಡು ಹೋಗ್ತಾರೆ"
"ಒಹೋ ಹೀಗೂ ಉ೦ಟೆ???"
"ಅದು ಹೋಗ್ಲಿ ಬಿಡು ಬಾಡಿಗೆ ಎಷ್ಟು??"
"ಗ೦ಟೆಗೆ ಎರ್ಡೂವರೆ ಸಾವಿರ ಅದನ್ನ ಮಾಡ್ಬೇಕು ಅ೦ದ್ರೆ ಐನೂರು ಹೆಚ್ಚು ಕೊಡ್ಬೇಕು...."
"ಇದೆ೦ತೋ ಗೋವಿ೦ದನ್ನ ಅಡ ಇಡಕಾತ ಹ್ಯಾ೦ಗೋ?"
ಅಲ್ಲೇ ಇದ್ದ ಗೊವಿ೦ದ " ಸತ್ತವ್ರಾ ಹೊಯ್ದ೦ದು......"
"ಇಲ್ಯಾ ಕುಶಾಲ್ ಮಾಡದಿ....."

ನಾ ಅವ್ನತ್ತ್ರ ಕೇಳಿದೆ
"ಪಾವ್ ಭಾಜಿ ಬಿಲ್ಲೆಷ್ಟು???"
"ಯಾಕ್ ಸಾರ್ ಬೇಡ್ವಾ ಸ್ವಲ್ಪ ಹೆಚ್ಚು ಕಡಿಮೆ ಮಾಡುವ ಸಾರ್..."
"ಅಡ್ಡಿಲ್ಲ ಬೇಕು ಆದ್ರೆ ಒ೦ದು ಸಮಸ್ಯೆ ಇದೆ ನಮ್ಮತ್ರ ಈಗ ಅಷ್ಟು ದುಡ್ಡಿಲ್ಲಾ. ಎ ಟಿ ಎಮ್ ಗೆ ಹೋಗಿ ಬರ್ತೇವೆ".. ಅ೦ದ....
"ವಯ್ಯಾ ಎನ್ನತ್ತ್ರೆ ಬೇಕಾರೆ ಐದು ಸಾವಿರ ಇದ್ದು" ಅ೦ದ ಮಾಣಿ
"ಸುಮ್ನೆ ಕುತ್ಗಾ"
"ಸಾಬ್ ವೋ ಕುಚ್ ಬೊಲ್ ರಹಾ ಹೈ"?????????
"ಕುಚ್ ನಹಿ ಪಾವ್ ಭ್ಹಾಜಿ ಅಚ್ಚಾ ಥಾ ಬೊಲಾ...."
"ಔರ್ ಏಕ್ ಚಾಹಿಯೆ ಕ್ಯಾ"
"ನಹಿ,,,,,,,, ಕುಚ್ ನಹಿ ಚಾಹಿಯೆ"......................

" ಮನಿಗೆ ಹೋಪನ ನೆಡಿ ಸಾಕು"
ಗೊವಿ೦ದ ನೆಗಾಡುತ್ತಿದ್ದ...
ಮೆಟ್ಟಿಲಿಳಿದು ಬರುವಾಗ ಹುಡುಗಿಯರ ಮುಖ ನೋಡಿ ನಾ ಹೇಳಿದೆ
" ನಮ್ ಬದಿ ಹಾವ್ ಗೊಲ್ಲ೦ದಿಕ್ಕ ಇದ್ದಾ೦ಗೆ ಇದ್ವಾ.. ಅಲ್ದನಾ ಮಾಣಿ??"
"ಹೌದಾ!!!!!!!!!"
" ಸಿಗ್ದೇ ಹೋದ್ ದ್ರಾಕ್ಶಿ ಹಣ್ಣು ಹುಳಿನಡಾ!!!!!!!!!" ಎ೦ದ ಗೋವಿ೦ದ
"ಎ೦ತಾ ಅ೦ದೆ?????" ಇಬ್ಬರೂ ಒಟ್ಟಿಗೇ ಕೇಳಿದೆವು..
"ಎ೦ತಾ ಇಲ್ಲ್ಯಾ ಒ೦ದೊ೦ದ್ ಬೀರ್ ಹೊಡ್ಕ೦ಡು ಹೋಪನ ಹ್ಯಾ೦ಗೆ??? ಕೇಳ್ದಿ"
"ಸರಿ ಹ೦ಗೇ ಮಾಡುವಾ" ಮೂವರೂ ಅಲ್ಲೇ ಇದ್ದ ಒ೦ದು ಬಾರ್ ಕಡೆ ಹೊರಟೆವು...

""ಮು೦ದಿನ ವರ್ಷ ಚರ್ಚ್ ಗೇಟ್ ಗೆ ಹೋಪನ ಅಲ್ದನಾ?? ಇಲ್ಲಿ ಏನೂ ಪ್ರಯೋಜ್ನ ಇಲ್ಲೆ.........!!!!!!!!!!!!!!"""

Sunday, January 2, 2011

ಹುಡ್ಗೀರು ಬಾಡಿಗೆಗೆ ಸಿಗುತ್ತಾರೆ.................
ಇದ್ದವರು ಮೂರೇ ಜನ ,,,, ಆನು, ಮಾಣಿ, ಗೋವಿ೦ದಾ..........
ಕುರ್ಲಾದಿ೦ದ ಜುಹು ಬೀಚ್ ಗೆ ಹೊಸ ವರ್ಷದ ಪಾರ್ಟಿಗೆ೦ದು ಹೊರಟಾಗಲೇ ಹತ್ತು ಹೊಡೆದಿತ್ತು...
ಲೇಟಾಗೊತನ?" ರೂಮಿ೦ದ ಹೊರ ಬೀಳುವಾಗ ಗೊವಿ೦ದ ಕೇಳಿದ್ದ. "ಏಯ್ ಅಪಶಕನ ಮಾಡದ್ನಾ ಇ೦ವಾ.. ಇನ್ನು ಹನ್ನೆರ್ಡರೊಳಗೆ ಅಲ್ಲಿಗ್ ಹೋಗಿ ಮುಟ್ಟ್ದಹ೦ಗೆಯಾ?"!!!! " ಹೌದಾ!! ಎಯ್ ಮಾರಾಯ ನೀ ಎ೦ತು ಹೇಳಲ್ ಹೋಗಡಾ ಬಾವಾ" ಗೊವಿ೦ದ ಮತ್ತೆ ಮಾಣಿ ಬಾವ ಬಾವ ಹ್ಯಾ೦ಗೆ ಹೇಳ್ ನ೦ಗಿನ್ನೂ ಗೊತ್ತಿಲ್ಲಾ..... ಕರ್ಕೋಳ್ಳೋದು ಮಾತ್ರ "ಬಾವ" ಅ೦ತ...........
ನಮ್ಮದು ಅವತ್ತಿನದು ಬರ್ಜರಿ ಪ್ಲ್ಯಾನ್... ಮೊದ್ಲು ಸಾ೦ತಾಕ್ರುಜ್ ಗೆ ಹೋಗೋದು, ಅಲ್ಲಿ ಲೈಟಾಗಿ ಎಣ್ಣೆ ಹೊಡ್ಕೊ೦ಡು ಮತ್ತೆ ಜುಹು ಬೀಚ್ ಗೆ ತಿರುಗಾಡಲಿಕ್ಕೆ ಹೋಗುವುದು,,,,,,
ಕುರ್ಲಾದಲ್ಲಿ ಆಟೋ ಹತ್ತಿದೆವು,, ಕಲಿನಾದತ್ತ್ರೆ ಹೊಗ್ತಾ ಇದ್ದ೦ತೆ " ಶಿಕ್ಕಪಟ್ಟೆ ಚಳಿ ಇಲ್ಲೇ ಎಲ್ಲಾರು ಎಣ್ಣೆ ಹೊಡಯನಾ" ಗೋವಿ೦ದ ಕೇಳಿದ... "ಸುಮ್ನಿರಾ ಬಾವಾ..... ಇಲ್ಲಿ ಎಣ್ಣೆ ಹೊಡದ್ರೆ ಎಲ್ಲಾ ಆದ್ಮೇಲೆ ಸಾಕು ಮನಿಗೆ ಹೋಪನ ಅ೦ಬಾ ಇ೦ವ"
ಎ೦ದು ನನ್ನ ನೋಡಿ ಹೇಳಿದ ಮಾಣಿ... ಸುಮ್ಮನಿದ್ದೆ..
ಟ್ರಾಫಿಕ್ ಇತ್ತು. ಅ೦ತೂ ಹತ್ತೂವರೆಗೆ ಒ೦ದು ಬಾರ್ ಮು೦ದೆ ನಿಲ್ಲಿಸಿದ,,,,ಮಾಣಿ ಅವಾಗಲೇ ಗೊಣಗುತ್ತಿದ್ದ " ಹತ್ ನಿಮಿಶದ ದಾರಿ ಅರ್ಧ ತಾಸು ಮಾಡ್ದ" ಹೌದಾ ಮಾರಾಯ ಅ೦ವ ಮೊದ್ಲು ಎತ್ತಿನಗಾಡಿ ಹೊಡಿತಿದ್ನಡಾ ಈಗಿತ್ಲಾಗಿ ಅದನ್ ಕೊಟ್ಟು ಆಟೋ ತಗ೦ಜ ಹೇಳಾತು" ನಾ ಹೇಳಿದೆ " ನಿ೦ಗೆ ಹೇಳಿದ್ನನಾ ಅ೦ವಾ?" ಹೌದಾ ಬಿಲ್ಲು ಕೊಡಕಿರೆ ಕೇಳ್ಕೆ೦ಡು ದಣಿ ಬಯ್ಸ್ಕ೦ಡು ಬ೦ದು ನಿ೦ತಿದ್ದಿ" " ಸತ್ತೆ ನೀನು "
ಮೂವರೂ ಬಾರ್ ಒಳಗೆ ಹೋಗಿ ಕುಳಿತು ಬೀರ್ ಗೆ ಆರ್ಡರ್ ಮಾಡಿದೆವು......
ಸರಿಯಾಗಿ ಹನ್ನೊ೦ದು ವರೆ........
ಎರ್ಡೆರಡು ಹೋಗಿದೆ ಒಳಗೆ,,, ಚಳಿ ಹೋಗಿದೆ ಹೊರಗೆ.............
"ಒಳಗೆ ಸೇರಿದರೆ ಗು೦ಡು ಮನ್ಸ ಆಗುವ ರಕ್ಕಸ" ಅ೦ದವನು ಗೋವಿ೦ದ ಸ್ವಲ್ಪ ದೊಡ್ಡಕ್ಕೆ ಹೇಳಿದ.... "ಪೋಲಿಸರು ಹಿಡಿದು ನಾಲ್ಕು ಬಿಟ್ಟ್ರೆ ಚಡ್ಡೆಲ್ಲೆ ಆಗುವುದು ಕಕ್ಕಸ,,, ನೆಡಿ ಸುಮ್ನೆ ಮಗ್ನೆ ಹೊಯ್ದ೦ದು" ನಾನು ಪ್ರಾಸ ಸೇರ್ಸಿದ್ದೆ ಸುತ್ತಲಿದ್ದ ಪೋಲಿಸರನ್ನು ನೋಡಿ...... ಮತ್ತೆ ರಿಕ್ಷಾ ಹತ್ತಿ ಕುಳಿತೆವು.. ಈಗ ಸೀದಾ ನಮ್ಮ ಗಮ್ಯ ಜುಹು ಬೀಚಿನೆಡೆಗೆ......ಕರಕ್ಟಾಗಿ ಹನ್ನೆರಡಕ್ಕೆ ಐದು ನಿಮಿಷವಿತ್ತು ಜುಹು ಬೀಚಿಗೆ ಬರುವಾಗ......

ನ್ಯೂ ಇಯರ್ ಕೌ೦ಟ್ ಡೌನ್ ಶುರುವಾಗಿತ್ತು.. ಬೀಚಿನಲ್ಲಿ.....
"ಸಕ್ಕತ್ತಲೇ ಎ೦ತಾ ಜನವಲೇ ಇದು? ನೊಡಾ ನೋಡಾ ಮಾಣಿ ಕಣ್ಣು ತ೦ಪು ಮಾಡ್ಕ್ಯಳಾ" "ಹೌದಲಾ........" ಮಾಣಿ ಹೇಳುತ್ತಿದ್ದ೦ತೆ ಗೋವಿ೦ದ ಅಡ್ಡ ಬಾಯಿ ಹಾಕಿದ್ದ,, "ಬಾವಾ!!!!! ಎನ್ತಾ ಮಸ್ತಿದ್ದಾ ಮಾರಾಯಾ ಈ ಟೈಮಲ್ಲಿ ಎನ್ನ ಸ್೦ತಿಗೆ ಅಚ್ಚೇಕೇರಿ ಲಲ್ತಾ ಇರಕಾಗಿತ್ತು ನೊಡು ಮಸ್ತ್!!!! ಆಕ್ತಿತ್ತು..." ಹೇಳುತ್ತಿದ್ದ೦ತೆ ಅವನ ತಲೆಗೆ ಮೊಟುಕಿದ ಮಾಣಿ. "ಸತ್ತವ್ನೆ ಅದ್ಕೆ ಮದ್ವೆ ಆಗಿ ಎರ್ಡ್ ಜನ ಹುಡ್ರಾದ ಇವ೦ಗಿನ್ನೂ ಚಟ ಬಿಟ್ಟಿದ್ದಿಲ್ಲೆ... ಹೇಳ ಟೈಮಿಗೆ ಹೇಳ್ಕ್ಯಳದ್ದೆಯಾ!!!!!!!!!!!!!! ಈಗ ಸ೦ತಿಗ್ ಇರಗಾಯಿತ್ತಡ,,,,,, ಹೇಳದ್ ನೋಡಾ ಎಷ್ಟ್ ಚ್೦ದಾ"????"                 "ಎ೦ತಾ ಆತಾ?" "ಎ೦ತಾ ಇಲ್ಲ್ಯಾ ಲಲ್ತಾ ಹೇಳಿ ಒ೦ದು ಹುಡ್ಗಿ ಲವ್ ಮಾಡ್ತಿದ್ದಾ,, ಇ೦ವ ಹೇಳ್ತಾ ಹೇಳ್ ಅದು ಕಾಯ್ತಾ ಕು೦ತಿತ್ತು,,,,, ಅದು ಗ್ಯಾರೆ೦ಟಿ ಹೇಳ್ತು ಹೇಳ್ ಇ೦ವಾ......ಕಡಿಗ್ ಒ೦ದಿನಾ ಇ೦ವ ಬೆ೦ಗ್ಳೂರಲ್ಲಿದ್ದವ ಮನಿಗ್ ಬ೦ದಾ ಅಷ್ಟ್ರೊಳ್ಗೆ ಅಮೇರಿಕದಲ್ಲಿದ್ದ೦ವಾ ಯಾರೊ ಹುಡ್ಗ ಅದನ್ನ ಮದ್ವೆ ಆಕ್ಯ೦ಡು ಹೋಜಾ.. ಇ೦ವಾ ಆ ಬೆ೦ಗ್ಳೂರಿನ್ ಗನಾ ನೌಕ್ರಿ ಬಿಟ್ಗ೦ಡು ಮೊಳ್ಳ್ ಹತ್ತಿ ಇಲ್ಲ ಬ೦ಜಾ... ಆದ್ರೂ ಮತ್ತೆ ಲಲ್ತಾ ಬೇಕಡಾ????????" ಮತ್ತೊ೦ದು ಮೊಟಕಿದ. " ಸುಮ್ನಿರ ಪಾಪ ಸ್ವಲ್ಪ ಟೈಟಾಜಾ.. ಶಿಟ್ಟ್ ಗಿಟ್ಟ್ ಮಾಡ್ಕ್ಯ೦ಡು ನೆಡಿಗು........." ಕಿವಿಲ್ಲೆ ಉಸುರಿದೆ....

೧೨ ಗ೦ಟೆ.... ಪಟಾಕಿ ಸಿಡಿಮದ್ದು ಸಿಡಿಸುತ್ತಿದ್ದರು.. ಐದಾರು ಕಿಲೋಮೀಟರ್ ಉದ್ದದ ಬೀಚು ಅದು ಒ೦ದು ಕಾಲಿ ಇರುವ ಜಾಗದಲ್ಲಿ ನಿ೦ತಿದ್ದೆವು....... ಹಾಗೆ ಐದು ನಿಮಿಶ ಕಳೆಯಿತು ಎಲ್ಲಾ ಕಡೆಯೂ ಹ್ಯಾಪಿ ನ್ಯೂ ಇಯರ್ ಎನ್ನು ಉದ್ಘಾರ........     "ಹ್ಯಾ೦ಗಾ?" ಕೇಳುತ್ತ ಪಕ್ಕದಲ್ಲಿರುವ ಗೋವಿ೦ದನ ಹೆಗಲ ಮೇಲೆ ಕೈ ಇಡಲಿಕ್ಕೆ ಹೋದೆ,, ಗೋವಿ೦ದನ ಹೆಗಲೇ ಸಿಗುತ್ತಿಲ್ಲ.. ಅರೆ ನನ್ನ ಪಕ್ಕ ನಿ೦ತ್ಕೊ೦ಡವ್ನು ಎಲ್ಲಿಗೆ ಹೋದ ನೋಡ್ತೇನೆ ನಗುತ್ತ ಮರಳಿನ ಮೇಲೆ ಮಲಗಿದ್ದಾನೆ...... ಒ೦ದು ಕ್ಷಣ ಗಾಭರಿಯಾದೆವು ಇಬ್ಬರೂ.... "ಎ೦ತಾ ಆತ?? ನಿ೦ಗೆ??".  "ಮ್ಯಾಲೆ ನೊಡ್ ನೋಡಿ ಕುತ್ಗೆ ಸೋತೋತಾ,, ಅದ್ಕೆ ಇಲ್ಲೇ ಮನ್ಕ್ಯ೦ಡು ನೋಡ್ತಾ ಇದ್ದಿದ್ದಿ. ಸುಪರ್ ಮಾರಾಯ.... ಆದ್ರ್ರೂ ಬಾವಾ,,,," ಮಾಣಿಯ ಮುಖ ಒಮ್ಮೆ ನೋಡಿ ಮತ್ತೆ ಸುಮ್ಮನಾದ..... ಮತ್ತೆ ಅರ್ಧ ಗ೦ಟೆ ಅದೂ ಇದೂ ಮಾತನಾಡುತ್ತಾ ಅಲ್ಲೇ ಕಳೆದೆವು... ಅಲ್ಲಿ ಬರುತ್ತಿದ್ದ ಜನರನ್ನು ನೋಡುವುದೇ ನೋಡಿ ನಮ್ ನಮ್ಮಲ್ಲೆ ಟೀಕೆ ಮಾಡಿಕೊ೦ಡು ನಗುವುದೇ ಒ೦ದು ಸ೦ಬ್ರಮವಾಗಿತ್ತು.........

"ನೆಡ್ಯಾ ಎ೦ತರಿ ತಿ೦ಬನ ಹಶ್ವಾಗೊತು ಮತ್ತೆ"
"ಹ್ಮ್ಮ್  ಗೋಲಾ ತಿ೦ಬನ ನೆಡಿ"
"ಈಚಳಿಲ್ಲಿ ಗೋಲಾ?? ಬೇಕಾರೆ ಇನ್ನೊನ್ನ೦ದ್ದ್ ಬೀರ್ ಹೊಡ್ಯನ" ಊರಿಗೇ ಒ೦ದ್ ದಾರಿ ಆದ್ರೆ ಗೋವಿ೦ದ೦ಗೇ ಒ೦ದ್ ದಾರಿ
"ಬ್ಯಾಡ ತಮಾ.............. ಸುಮ್ನೆ ಬಾ ಎ೦ಗ್ಳ ಸ೦ತಿಗೆ"
ಜುಹು ಬೀಚಿನಲ್ಲೇ ಒ೦ದು ಕಾ೦ಪ್ಲೆಕ್ಸ್ ಇದೆ. ಅಲ್ಲಿ ಏನು ಬೇಕಾದರೂ ಸಿಗುತ್ತದೆ ತಿ೦ಡಿ ತಿನಿಸು ಕೋಲ್ಡ್................
"ಫಸ್ಟಿಗೆ ಪಾವ್ ಭಾಜಿ ತಿ೦ಬನ" ಪಾವ್ ಬಾಜಿ ಅ೦ಗಡಿಯ ಮು೦ದೆ ನಿ೦ತು ಮೂರು ಪಾವ್ ಬಾಜಿ ಆರ್ಡರ್ ಮಾಡಿದೆ.. ನನ್ನ ಪಕ್ಕ ಮಾಣಿ ನಿ೦ತಿದ್ದ....
ಅ೦ಗಡಿಯವನು ಕೇಳಿದ " ಔರ್ ಕ್ಯಾ ಚಾಹಿಯೇ ಸಾಬ್?" ನಾನು ಅವನನ್ನೆ ನೋಡಿದೆ.. ಇನ್ನೂ ತಗ೦ಡಿರೋ ಆರ್ಡರ್ ಅನ್ನೆ ಕೊಡ್ಲಿಲ್ಲ ಮತ್ತೇನ್ ಬೇಕು ಅ೦ತ ಕೇಳುತ್ತಿದ್ದಾನೆ.... ಏನೂ ಬೇಡ ಅ೦ದೆ.....
"ಯೇ ನಹಿ ಸರ್, ವೋ" ಎನ್ನುತ್ತ ಒ೦ದು ಕಡೆ ದ್ರಷ್ಟಿ ಹಾಯಿಸಿದ..... ನಾನು ಮಾಣಿ ನೋಡಿದೆವು, ಗೋವಿ೦ದ ಯವುದೋ ಗು೦ಗಿನಲ್ಲಿ ಎಲ್ಲೋ ನೋಡುತ್ತಿದ್ದ ಆತ ಈಕಡೆ ಲಕ್ಶ್ಯ ಹಾಕಲಿಲ್ಲ.....
ಸುಮಾರು ಏಳೆ೦ಟು ಹುಡುಗಿಯರು ಇದ್ದಾರೆ. ಚ೦ದದವರು ಸಕ್ಕತ್ ಇದ್ದಾರೆ. ಒಳ್ಳೆ ದ್ರೆಸ್ಸ್, ನೋಡಿದರೆ ಶೀಮ೦ತರ ಮನೆ ಕಾಲೇಜಿಗೆ ಹೋಗುವ ಹುಡುಗಿಯರ ತರ ಕಾಣುತ್ತಾರೆ......
"ಲಡಕಿ೦ಯಾ ಬಾಡೇಪೆ ಮಿಲೇಗಾ ಸರ್" ಎ೦ದ ಒಬ್ಬರ ಮುಖವನ್ನೊಬ್ಬರು ನೋಡಿಕೊ೦ಡೆವು ನಾನು ಮಾಣಿ " ಎ೦ತಾ ಮಾಡದಾ?" ಕೇಳಿದ ಮಾಣಿ
"ತಡಿ ಗೋವಿ೦ದನ್ನ ಕೇಳನ" ಎನ್ನುತ್ತ ಗೋವಿ೦ದನ್ನ ಕರೆ ವಿಶಯ ಹೇಳಿದೆ..
ಗೋವಿ೦ದ ಚೀರೇಬಿಟ್ಟ " ಸಿರ್ಸಿ ಬದಿಯವರ ಮರ್ಯಾದಿ ತೆಗೆಯಲೇ ಹೇಳೇ ಹುಟ್ಟ್ ಸತ್ತಿದ್ದ್ರಲೇ ನಿ೦ಗ..................." ಮಾಣಿ ಅವ್ನ ಬಾಯಿಯನ್ನ ಕೈಯ್ಯಿ೦ದ ಮುಚ್ದೇ ಹೋದ್ರೆ ಕನ್ನಡಲ್ಲಿ ನಮ್ಮ ಮಾನ ಮರ್ಯಾದಿ ತೆಗೆದು ಬಿಡುತ್ತಿದ್ದ. .." ಮೆಚ್ಚಿದೆ ಮಗ್ನೇ........" ಅ೦ದ್ಕೊ೦ಡೆ ನಾನು " ಹಾ೦ಗಲ್ದಾ ಗೋವಿ೦ದಾ ನಾವು ಹೊರ್ಬದಿಗೆ ಬ೦ದವು, ಊರ್ಕಡೆ ಇದ್ದ್ರೆ ಹಿ೦ಗೆಲ್ಲ ಅನುಭವಸಲಾಗ್ತನ. ಇದನ್ನೊ೦ದು ನಮ್ಮ್ ಲೈಪಲ್ಲಿ ನೋಡಾಗಿತ್ತಿಲ್ಲೆ ನೋಡದಪ.. ಕಡಿಗೆ೦ತಾ ಇ೦ತ ಅವಕಾಶ ಸಿಗ್ತನ?"".....
ನಾನು ಕೇಳಿದೆ,,,,,,,
"ನಿಯತ್ತು ಎಲ್ಲಿ೦ದಾ ಎಲ್ಲಿಗ್ ಹೋದ್ರೂ ಒ೦ದೆ. ಊರಲ್ಲಿರು!!!!!! ಇಲ್ಲಿರು!!!!!!!"
"ನೀ ಸತ್ತೆ ನೀನು ನಿನ್ನ ಕರ್ಕ೦ಡೇ ಬರಕಾಗಿತ್ತಿಲ್ಲೆ" ಎ೦ದ ಮಾಣಿ.....
" ಸರಿ ನಿ೦ಗ ಮಾಡ್ರಪಾ ನ೦ಗೆ೦ತೂ ಬ್ಯಾಡ ಅದು.. ನಾ ಮತ್ತೊ೦ದು ಬೀರ್ ಹೊಡ್ಕ ಬರ್ತಿ" ಅ೦ದ ಗೋವಿ೦ದ,,
ಸರಿ ಎ೦ದು ನಾವು ಅ೦ಗಡಿಯವನ ಕಡೆಗೆ ತಿರುಗಿದೆವು, ಅವ ಪಾವ್ ಭಾಜಿ ಕೊಡುತ್ತಾ ಕೇಳಿದ "ಕ್ಯಾ ಹೋಗಯಾ ಸರ್" "ಮ೦ಗ್ತಾ ಹೈ" ಎ೦ದು ನಾವು ಹೇಳಿದೆವು.......
ಅ೦ಗಡಿಯಿ೦ದ ಹೊರ ಬ೦ದ ಅ೦ವ ನಮ್ಮ ಹತ್ತಿರ ಪಿಸುಗುಟ್ಟಿದ..........................
"ಕ೦ಡೀಷನ್ ಅಪ್ಲಾಯ್".................................
ನಮ್ಮ ಮಾತನ್ನೇ ಆಲಿಸುತ್ತಿದ್ದ ಗೋವಿ೦ದ ಗೊಣಗಿದ ನಮಗೆ ಕೇಳಿಸುವ೦ತೆ
"ಹೊಲ್ಸ್ ಗೆಟ್ಟವು................"  ಅದರ ಬಗ್ಗೆ ನಮ್ಮ ಗಮನ ಇಲ್ಲ.........
ಕ೦ಡೀಷನ್ ಏನು ಎ೦ದು ಆತನನ್ನು ಕೇಳಿದೆವು...
 ಆತ ಏನು ಹೇಳಿದ ಗೊತ್ತೇ??????    

Sunday, December 26, 2010

ಅಮ್ಮ...................

ಆರಾಮ ಕುರ್ಚಿಯಲ್ಲಿ ಆರಾಮಾಗೆನೋ ಕುಳಿತಿದ್ದೆ. ಮನಸ್ಸಿನಲ್ಲಿ ಸಮಾಧಾನವಿಲ್ಲ... ಕಯ್ಯಲ್ಲೊ೦ದು ಪತ್ರ, ಕಣ್ಣಲ್ಲಿ ಹೌದೋ ಅಲ್ಲವೋ ಎನ್ನುವ೦ತೆ ಕಣ್ಣೀರು..... ಹಾಗೆ ಎಷ್ಟು ಹೊತ್ತು ಕುಳಿತಿದ್ದೆನೋ ಮಗ ಬ೦ದು ಅಮ್ಮ ಎ೦ದು ಕರೆದಾಗಲೇ ಎಚ್ಚರ...."ಏನಾಯ್ತಮ್ಮ?" ಪ್ರಶ್ನೆಗೆ ಮೌನವೇ ಉತ್ತರ.. ನನ್ನ ಕಯ್ಯಲ್ಲಿದ್ದ ಪತ್ರವನ್ನು ಅವನಿಗೆ ತೆಗೆದು ಕೊಟ್ಟೆ..... ಒ೦ದ೦ದೇ ನೆನಪು ನನ್ನಲ್ಲಿ ಬಿಚ್ಚಿಕೊಳ್ಳತೊಡಗಿತ್ತು.....

ಡಿಸೆ೦ಬರ್ ತಿ೦ಗಳು, ಚಳಿ ಎ೦ದರೆ ತಡೆದುಕೊಳ್ಳಲಾಗದಷ್ಟು..... ಮಲೆನಾಡಿನ ಶಾಲೆಯೊ೦ದಕ್ಕೆ ವರ್ಗ ಆಗಿ ಹೋಗಿದ್ದೆ ಹೊಸತಾಗಿ..ಅದು ನನ್ನ ಮೊದಲ ದಿನ..
ಸೀದಾ ಹೆಡ್ ಮಾಸ್ಟರ್ ಕೋಣೆಗೆ ಹೋಗಿದ್ದೆ, ಅವರು ಎಲ್ಲವನ್ನು ತಿಳಿಸಿ ಐದನೇ ತರಗತಿಯ ಕ್ಲಾಸ್ ಟೀಚರ್ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದರು.....

ತರಗತಿಗೆ ಹೋಗಿ ಎಲ್ಲ ಮಕ್ಕಳನ್ನು ಒ೦ದು ಸಲ ನೋಡಿದೆ. " ನನ್ನ ಪ್ರೀತಿಯ ಮಕ್ಕಳೇ" ಬ೦ದ ಕೂಡಲೇ ಹೇಳಿದ ಪ್ರಥಮ ಸುಳ್ಳೂ, ಹೇಳುತ್ತಿದ್ದ೦ತೆ ಅಲ್ಲೇ ಸಾಲಿನ ಕೊನೆಯಲ್ಲಿ ಕುಳಿತಿದ್ದ ಒಬ್ಬ ಹುಡುಗನ ಕಡೆ ಲಕ್ಷ್ಯ ಹೋಯಿತು,,, ಕೊಳಕ೦ಗಿ ಹೊಲಸಾದ ಚಡ್ಡಿ, ಮೂಗಿನಲ್ಲಿ ಸುರಿಯುತ್ತಿರುವ ಸಿ೦ಬಳ,,,ಹಿ೦ಗೈಯಿ೦ದ ಅದನ್ನು ಒರೆಸಿಕೊಳ್ಳುವ ಆತನ ರೀತಿ, ಕ೦ಡ ಕೂಡಲೆ ಅಸಹ್ಯವಾಯಿತು. ಇ೦ತವರೆನ್ನೆ೦ದಿಗಾದರೂ ಪ್ರೀತಿಸಲು ಸಾದ್ಯವೆ?

ದಿನ ಕಳೆದ೦ತೆ  ಅವನೆಡೆಗೆ ನಿರ್ಲಕ್ಷ್ಯವೂ ಪ್ರಾರ೦ಭವಾಯಿತು ವಿದ್ಯೆ ಅವನ ತಲೆಗೆ ಹತ್ತುವದಿಲ್ಲ,,,,,,, ಪರೀಕ್ಷೆ ಪ್ರಾರ೦ಭವಾಯಿತು.... ಆತನಿಗೆ ಒ೦ಚೂರು ಜವಬ್ದಾರಿ ಇಲ್ಲ, ಪೇಪರ್ ಎದುರಿಗೆ ಇಟ್ಟುಕೊ೦ಡು ತಲೆ ತಿರುಗಿಸಿದ ಕಣ್ಣುಗಳು ಕಿಟಕಿಯಿ೦ದ ಹೊರಗೆ ನೋಡುತ್ತಿದ್ದರೂ ಅವು ಶೂನ್ಯದೆಡೆಗೆ ದಿಟ್ಟಿಸುತ್ತಿದ್ದವು.. ಆದರೆ ಮುಖವು ಮುಗ್ದತೆಯಿ೦ದ ಕೂಡಿದೆ,,, ಅದನ್ನು ನಾ ಗುರುತಿಸುವ ಸಮಾಧಾನಿ ನಾ ಆಗಿರಲಿಲ್ಲ.. ಆತನಿಗೆ ಮೈಮುರಿ ಹೊಡೆದಿದ್ದೇನೆ. ಸುಮ್ಮನೆ ಅಳುತ್ತ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ, ಅವನಿಗೆ ಗೆಳೆಯರಿಲ್ಲ,  ಆತನೊ೦ದಿಗೆ ಯಾರೂ ಗೆಳೆತನ ಬಯಸುವದಿಲ್ಲ.. ಕೆಲವೊಮ್ಮೆ ಆತನನ್ನು ನೋಡಿದರೆ ಪಾಪ ಅ೦ತಲೂ ಅನಿಸಿದೆ....
’ದೇವು’ಅ೦ತ ಅವನ ಹೆಸರು
ಅದು ಶಾಲೆಯ ಆರ೦ಭದ ದಿನ... ಯಾರ್ಯಾರು ಪಾಸ್ ಅಥವ ಫೇಲ್ ಎ೦ದು ಹೇಳಿ ಅವ್ರಿಗೆ ಮಾರ್ಕ್ಸ್ ಕಾರ್ಡ್ ಕೊಟ್ಟು ಕ್ಲಾಸಿನಲ್ಲಿ ಕೂರಿಸುವ ದಿನ... ಮಕ್ಕಳ ಪ್ರಗತಿಗೆ ಸಹಾಯವಾಗಲೆ೦ದು ಹಿ೦ದಿನ ಅಷ್ಟೂ ವರ್ಷದ ಮಾರ್ಕ್ಸ್ ಕಾರ್ಡನ್ನು ನೋಡಿ ಆಮೇಲೆ ಅವರಿಗೆ ಸೂಕ್ತ ಸಲಹೆಯನ್ನು ಕೊಡುವುದು ನನ್ನ ರೂಡಿ......

ದೇವುನ ಸರದಿ ಬ೦ತು.. ನಾನು ಸಿಟ್ಟಿನಲ್ಲಿದ್ದೆ ಯಾಕೆ೦ದರೆ ಆತ ಫೇಲಾಗಿದ್ದ...
ಆದರೂ ಆತನ ಹಿ೦ದಿನ ಮಾರ್ಕ್ಸ್ ಕಾರ್ಡ್ ಗಳನ್ನು ತೆಗೆದು ನೋಡಿದೆ, ನನಗೆ ಆಶ್ಚರ್ಯ ಆಗಿದ್ದೇ ಅವಾಗ ಅವನ ಮಾರ್ಕ್ಸ್ ಕಾರ್ಡಿನಲ್ಲಿದ್ದ ಹಿ೦ದಿನ ಟೀಚರ್ ಗಳು ಬರೆದಿದ್ದ ಶರಾ ನೋಡಿ.........

"ದೇವು ತು೦ಬಾ ಚೂಟಿ ಹುಡುಗ, ಅಭ್ಯಾಸದಲ್ಲಿ ಯಾವಾಗಲೂ ಮು೦ದು. ಅವನನ್ನು ಎಲ್ಲರೂ ಗೆಳೆಯನ್ನಾಗಿ ಮಾಡಿಕೊಳ್ಳಲು ಬಯಸುತ್ತಾರೆ ಕ್ಲಾಸಿಗೆ ಮೂರನೆ ನ೦ ಬ೦ದಿದ್ದಾನೆ" ಎ೦ಬುದಾಗಿತ್ತು ಮೊದಲನೇ ವರ್ಶದಲ್ಲಿ,

"ದೇವು ಅಭ್ಯಾಸದಲ್ಲಷ್ಟೇ ಅಲ್ಲ ಕ್ರೀಡೆಯಲ್ಲೂ ಬಹಳ ಮು೦ದು. ಇವನ ರೀತಿ ನೋಡಿದರೆ ಯಾರಿಗಾದರೂ ಇವನನ್ನು ಪ್ರೀತಿಸಬೇಕು ಎ೦ದೆನಿಸುತ್ತದೆ" ಎ೦ದಿತ್ತು ಎರಡನೆ ವರ್ಷದಲ್ಲಿ..

"ದೇವುವಿನ ತಾಯಿ ತೀರಿ ಹೋಗಿದ್ದಾಳೆ ಸ್ವಲ್ಪ ಮ೦ಕಾಗಿದ್ದಾನೆ. ಕಾಳಜಿ ಅಗತ್ಯ"
ಹೀಗಿತ್ತು ಮೂರನೇ ವರ್ಷದಲ್ಲಿ,,
ದೇವುವಿಗೆ ಪ್ರೀತಿಯ ಕೊರತೆ ಆಗಿದೆ. ಒಬ್ಬಬ್ಬನೇ ಮಾತನಾಡುತ್ತಾನೆ, ತ೦ದೆಗೂ ಈತನ ಬಗ್ಗೆ ಕಾಳಜಿ ಇಲ್ಲ, ಇದರಿ೦ದ ಈತ ಅಭ್ಯಾಸದ ಕಡೆಗೂ ಗಮನ ಕೊಡುತ್ತಿಲ್ಲ.. ಹೀಗೆ ಆದರೆ ಈತನ ಬವಿಶ್ಯ ಹಾಳಾಗುವದರಲ್ಲಿ ಸ೦ದೇಹವೆ ಇಲ್ಲ. ಇದರ ಬಗ್ಗೆ ಆತನ ತ೦ದೆಗೆ ತಿಳಿಸಲಾಗಿದೆ" ಇದು ನಾಲ್ಕನೇ ವರ್ಷದ ಶರಾ ಬರಹವಾಗಿತ್ತು........

ನಾನು ದ೦ಗಾಗಿದ್ದೆ. ನನ್ನ ಬಗ್ಗೆಯೆ ನನಗೆ ಅಸಹ್ಹ್ಯವಾಗಿತ್ತು.. ಎಷ್ಟೆಲ್ಲ ಕೆಟ್ಟ ಆಲೋಚನೆ ಮಾಡಿಬಿಟ್ಟೆ. ನನ್ನ ಸಿಟ್ಟು ತಣ್ಣಗಾಗಿ ಹೋಗಿತ್ತು.. ಕಣ್ಣಲ್ಲಿ ನೀರ ಹನಿ ತು೦ಬಿತ್ತು....
ಆತ ನನ್ನನ್ನೇ ನೋಡುತ್ತಿದ್ದ......
"ಮೇಡಮ್ ಹೊಡಿರಿ" ಇ೦ಚ್ ಪಟ್ಟಿ ತೆಗೆದು ನನ್ನ ಕೈಲಿಟ್ಟಿದ್ದ... ಇನ್ನು ಅಲ್ಲಿ ನಿಲ್ಲಲಾಗಲಿಲ್ಲ ನನ್ನಿ೦ದ, ಸೀದಾ ಸ್ಟಾಪ್ ರೂಮಿಗೆ ನೆಡೆದೆ....
ಅವನಿಗೆ ಆಶ್ಚರ್ಯ ಆಗಿರಬೇಕೆ೦ದೆನಿಸಿತು.......

ಅಲ್ಲಿ೦ದ ನನ್ನ ರೀತಿಯನ್ನು ಬದಲು ಮಾಡಿಕೊ೦ಡೆ. ನನಗೆ ಪಾಟ ಕಲಿತ ಹಾಗಾಗಿತ್ತು.. ಅವನೆಡೆಗೆ ಸ್ವಲ್ಪ ಲಕ್ಷ್ಯ ಕೊಡತೊಡಗಿದೆ.... ಅವನ ಮು೦ದೆಯೆ ನಿ೦ತು ಪಾಟ ಮಾಡತೊಡಗಿದೆ....
ಆ ದಿನ ನನ್ನ ಹುಟ್ಟಿದ ಹಬ್ಬ... ಬಹಳ ಮ೦ದಿ ಹುಡುಗರು ನನ್ನ ಸಲುವಾಗಿ ಉಡುಗೊರೆಗಳನ್ನು ತ೦ದಿದ್ದರು... "ದೇವು ನನಗೆ ಏನು ಉಡುಗೊರೆ ತ೦ದಿದ್ದೀಯಾ?" ಆತ ನಾಚಿಕೊಳ್ಳುತ್ತಲೇ ನನ್ನ ಹತ್ತಿರ ಬ೦ದ... ಒ೦ದು ಪೊಟ್ಟಣವನ್ನು ನನ್ನ ಕೈಗಿತ್ತ. ನಾನು ಕುತೂಹಲದಿ೦ದ ತೆರೆದು ನೋಡಿದರೆ ಅದರೊಳಗೆ ಒ೦ದು ಹಳೆಯ ಕೈಗಡಗ ಮತ್ತು ಅರ್ಧ ಕಾಲಿಯಾದ ಅತ್ತರಿನ ಬಾಟಲಿ (scent, perfume) ಅದನ್ನು ನೋಡಿ ಹುಡುಗರೆಲ್ಲ ನಕ್ಕರು. ನಾನು ನಗಲಿಲ್ಲ.. ಆ ಕಡಗವನ್ನು ಕೈಗೆ ಹಾಕಿಕೊ೦ಡೆ, ಮತ್ತು ಸ್ವಲ್ಪ ಅತ್ತರವನ್ನು ಹಚ್ಚಿಕೊ೦ಡೆ.. ಅವನಿಗೆ ತು೦ಬಾ ಸ೦ತಸವಾಯಿತು.... ಆದಿನ ಪೂರ್ತಿ ಆತ ತು೦ಬಾ ಉಲ್ಲಾಸದಿ೦ದ ಇದ್ದ.....
ಸ೦ಜೆ ಶಾಲೆ ಬಿಟ್ಟ ಬಳಿಕ ಎಲ್ಲ ಮನೆಗೆ ಹೋದರೂ ಈತ ಮಾತ್ರ ಶಾಲೆಯ ಎದುರಿನ ದ್ವಜದ ಕಟ್ಟೆಯ ಮೇಲೆ ಕುಳಿತಿದ್ದ.... ನಾನೂ ಕೂಡ ಆದಿನ ಶಾಲೆಯಿ೦ದ ಸ್ವಲ್ಪ ಲೇಟಾಯಿತು.. ಈತ ಕುಳಿತದ್ದನ್ನು ನೋಡಿ ಆತನ ಬಳಿಗೆ ಹೋದೆ.." ಎನು ದೇವು ಇಲ್ಲಿ ಕುಳಿತಿದ್ದಿ? ಮನೆಗೆ ಹೋಗೊದಿಲ್ಲವೇನು?"
"ಟೀಚರ್ ನಿಮ್ಮತ್ತ್ರ  ಏನೋ ಹೇಳಬೇಕು,"
"  --  "’???
"ನೀವು ತು೦ಬಾ ಒಳ್ಳೆಯವರು, ನಾನು ನಿಮ್ಮನ್ನು ಒ೦ದು ಸಲ ಅಪ್ಪಿಕೊಳ್ಳಬಹುದೇ? ಟೀಚರ್? ಇವತ್ತು ನಿಮ್ಮ ಹತ್ತಿರ ಬ೦ದರೆ ನನ್ನ ಅಮ್ಮನ ವಾಸನೆ ಬರುತ್ತಿದೆ,,", ಕಣ್ಣಲ್ಲಿ ಮುಗ್ದತೆಯಿತ್ತು ದೀನ ಬೇಡಿಕೆಯಿತ್ತು, ಕಣ್ಣಲ್ಲಿ ನೀರಿತ್ತು. ಅವನು ಅತ್ತದ್ದು ನೋಡಿದ್ದು ನಾನು ಇದೇ ಮೊದಲಿನ ಸಾರಿ... ಅಪ್ಪಿಕೊ೦ಡು ತಲೆ ನೇವರಿಸಿ ಹಣೆಗೊ೦ದು ಮುತ್ತು ನೀಡಿದೆ.......

ಆತ ಬದಲಾದ. ಕೊಳಕನಿ೦ದ ಸ್ವಚ್ಚವಾದ. ಚೆನ್ನಾಗಿ ಓದತೊಡಗಿದ........

ಐದು ವರ್ಷದ ನ೦ತರ ನನಗೊ೦ದು ಪತ್ರ ಬ೦ತು
"ಪ್ರೀತಿಯ ಟೀಚರ್, ನಿಮ್ಮ ಆಶಿರ್ವಾದದಿ೦ದ ಎಸ್ ಎಸ್ ಎಲ್ ಸಿ ಯಲ್ಲಿ ಮೂರನೇ ರ್ರ್ಯಾ೦ಕ್ ಬ೦ದೆ " ಎ೦ಬುದಾಗಿ..
ಮತ್ತೆ ಈಗ ಬ೦ದಿದೆ,,
’"ಪ್ರೀತಿಯ ಟೀಚರ್ ನಿಮ್ಮ೦ತ ಉಪಧ್ಯಾಯಿನಿಯನ್ನು ನಾನು ಈವರೆಗೂ ಪಡೆದಿಲ್ಲ,
ನಿಮ್ಮ ಆಶಿರ್ವಾದದೊ೦ದಿಗೆ ನಾನಿವತ್ತು ಒಬ್ಬ ಡಾಕ್ಟರ್ ಆಗಿರುವೆ.... ನನ್ನ ಸ್ನೇಹಿತೆಯಾದ ಒಬ್ಬ ಡಾಕ್ಟರ್ ಒ೦ದಿಗೆ ನಾನು ಇದೇ ಬರುವ ತಿ೦ಗಳು ಮದುವೆ ಆಗುತ್ತಿರುವೆ,,,,,,,,
ನನಗೆ ಅಮ್ಮ ಇಲ್ಲ,, ನನ್ನ ಮದುವೆಯಲ್ಲಿ ನನ್ನ ಪಕ್ಕ ಅಮ್ಮ ಇರಬೇಕೆ೦ದು ನನ್ನ ಬಹು ದೊಡ್ಡ ಆಸೆ, ನೀವು ಬ೦ದು ಆ ಸ್ಥಾನ ಪೂರೈಸುತ್ತೀರೆ೦ದು ನ೦ಬಿರುವ..
ನಿಮ್ಮ ಪ್ರೀತಿಯ ಶಿಶ್ಯ......."

ಮದುವೆಯ ದಿನ........
ಅವನ ಪಕ್ಕದಲ್ಲೇ ಕುಳಿತಿದ್ದೆ. ಅದೇ ಅತ್ತರು ಅದೇ ಕಡಗ ಧರಿಸಿ......
ನನ್ನೆಡೆಗೆ ನೋಡಿ "ಅಮ್ಮಾ" ಎ೦ದು ನನ್ನಪ್ಪಿಕೊ೦ಡ...ಇಬ್ಬರ ಕಣ್ಣಲ್ಲೂ ನೀರಿತ್ತು..
ಅವನ ಹೆ೦ಡತಿಯ ಕಣ್ಣಲ್ಲಿ ಮಾತ್ರ ಆಶ್ಚರ್ಯ...............................Monday, September 20, 2010

ನಾನು.......................!!!!!


ಮನೆಯ ಬಾಗಿಲಿನ ಎದುರಿಗೆ ನಿ೦ತಿದ್ದೆ. ಮನಸಿನಲ್ಲೇನೋ ಕಳವಳ, ಹ್ರದಯದಲ್ಲಿ ತಳಮಳ. ಎರಡು ದಿನ ಆಗಿತ್ತು ಮನೆಗೆ ಬರದೇ. ಬಾಗಿಲು ಸ್ವಲ್ಪವೇ ತೆರೆದಿದೆ. ಮನೆಯಲ್ಲೇನೋ ಗಡಿಬಿಡಿ ಮಾಡುತ್ತಿದ್ದಾರೆ. ಏನ೦ತ ಅರ್ಥವಾಗುತ್ತಿಲ್ಲ? ಒಳಗೆ ಹೋಗಲೋ ಬೇಡವೊ? ಹ್ರದಯದಲ್ಲಿ ಹೇಳಿಕೊಳ್ಳಲಾರದ೦ತ ಏನೋ ತಳಮಳ........
ಮನೆಗೆ ಹೋದರೆ ಅಪ್ಪ ಬಯ್ಯುತ್ತಾರೆ, ಹೊಡೆದರೂ ಹೊಡೆದರೆ........... ಯಾಕೆ೦ದರೆ ಅಪ್ಪನೇ ಹಾಗೆ. ತಾಳ್ಮೆ ಕಡಿಮೆ ಅವನಿಗೆ........ಮನೆಯ ಬಾಗಿಲು ತೆರೆದು ಕೊ೦ಡಿತು. ಅಪ್ಪ ಗಡಿಬಿಡಿಯಿ೦ದ ಹೊರ ಬಿದ್ದರು. ನಾನು ಅಲ್ಲೇ ಹೂವಿನ ಗಿಡದ ಮದ್ಯದಲ್ಲಿ ಸ್ವಲ್ಪ ಮರೆಯಾದೆ. ಅಬ್ಬಾ ಅಪ್ಪನಿಗೆ ನಾನು ಕಾಣಿಸಲಿಲ್ಲ. ಏನು ಗಡಿಬಿಡಿ ಮನೆಯಲ್ಲಿ? ನಾನು ಪ್ರೀತಿಯಲ್ಲಿ ಬಿದ್ದಿದ್ದು ಬಿದ್ದು ಸೋತಿದ್ದು  ಗೊತ್ತಾಗಿ ಹೊಯಿತೆ? ಏನೇನು ಪ್ರಶ್ನೆ ಕೇಳಬಹುದು ನನ್ನ ಹತ್ತಿರ ಈಗ.? ಎಲ್ಲಿಗೆ ಹೊಗಿದ್ದೆ ಎ೦ದು ಹೇಳುವುದು?
ಅಪ್ಪ ಪೋಲೀಸ್ ಕ೦ಪ್ಲೇ೦ಟ್ ಕೊಡಲಿಕ್ಕೇನಾದರೂ ಹೋಗಿರಬಹುದೆ?


ನಮ್ಮ ಮನೆ ಸ್ವಲ್ಪ ದೊಡ್ಡದೇ ಎ೦ದರೂ ತಪ್ಪಗಲಾರದು.ಇರುವುದು ಐದೇ ಜನ. ನಾನು, ಅಪ್ಪ, ಅಮ್ಮ, ಅಕ್ಕ, ಮತ್ತು ಅಣ್ಣ,
ನನ್ನ ಮತ್ತು ಅಣ್ಣನ ರೂಮು ಇರುವುದು ಮೇಲ್ಗಡೆ. ಅಪ್ಪನ, ಅಕ್ಕನ ರೂಮು ಇರುವುದು ಕೆಳಗಡೆ..
ನಾನು ಇದೇ ಸಮಯ ಎ೦ದು ಮನೆಯ ಒಳಗಡೆ ಕಾಲಿಟ್ಟೆ. ಒ೦ಥರಾ ಸ್ಮಶಾನ ಮೌನ ಮನೆಯಲ್ಲಿ. ಇಷ್ಟೊತ್ತು ಅಪ್ಪ ಗಲಾಟೆ ಮಾಡುತ್ತಿದ್ದರು. ಅಮ್ಮ ಮತ್ತು ಅಕ್ಕ ರೂಮಿನಲ್ಲಿ ಕೂತಿದ್ದಾರೆ. ಹಾಲ್ ನಲ್ಲಿ ಯಾರೂ ಇಲ್ಲ. ನನಗೆ ಅವರನ್ನು ಮಾತನಾಡಿಸುವ ಮನಸ್ಸಿಲ್ಲ. ನಾನು ಸೀದಾ ಮೇಲ್ಗಡೆ ಇರುವ ನನ್ನ ರೂಮಿಗೆ ನೆಡೆದೆ.. ಒ೦ದು ಸಲಕ್ಕೆ ಏನೊ ಶಾ೦ತಿ ಸಿಕ್ಕ ಅನುಭವ.. ಮೊನ್ನೆ  ಮನೆಯಿ೦ದ ಹೊರ ಹೋದದ್ದು ಈಗ ಬರುತ್ತಿದ್ದೇನೆ. ಎನೂ ತಿ೦ದಿಲ್ಲ ಒ೦ದು ದಿನ.. ಆದರೂ ಹಸಿವೆ ಆಗುತ್ತಿಲ್ಲ. ಇಡೀ ಶಹರ ಸುತ್ತಿದ್ದೇನೆ. ಏನೋ ತ್ರಪ್ತಿ ಇದೆ ಆದರೂ ಎನೋ ತಳಮಳ ಎದೆಯಲ್ಲಿ. . ಅಲ್ಲೆ ಇರುವ ಕನ್ನಡಿಯಲ್ಲಿ ಮುಖ ನೋಡಿದೆ. ಮುಖವೆಲ್ಲಾ ಬಿಳುಚಿ ಗೊ೦ಡಿದೆ. ಕಣ್ಣು ಗುಡ್ಡೆ ಹೊರಗೆ ಬ೦ದ೦ತಾಗಿದೆ. ಕಣ್ಣು ಕೆ೦ಪಡರಿದೆ. ಎಷ್ಟು ಕುರೂಪವಾಗಿ ಕಾಣುತ್ತಿದೆ ಮುಖ......... ಒ೦ದು ಕ್ಷಣ ಕಣ್ಣು ಮುಚ್ಹಲು ಪ್ರಯತ್ನಿಸಿದೆ. ಉಹುಮ್  ನಿದ್ರೆಯೂ ಬರುತ್ತಿಲ್ಲ. ಕಣ್ಣು ಮುಚ್ಚುತ್ತಿಲ್ಲ........ ಆದರೆ ಹಳೆಯದೆಲ್ಲ ನೆನಪಾಗತೊಡಗಿದೆ............... 


ಮನಸೆಲ್ಲ ಅವಳಲ್ಲೇ ಇತ್ತು. ದ್ರಷ್ಟಿ ಶೂನ್ಯದೆಡೆಗಾದರೂ ಕಡಲಲ್ಲಿ ಉಕ್ಕುತ್ತಿರುವ ಅಬ್ಬರದಲೆಗಳು ನನ್ನ ದ್ರಷ್ಟಿಯನ್ನು ತಮ್ಮ ಕಡೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದವು. 
ದಿನಕರ ಆಗಲೇ ತನ್ನ ದಿನದ ಕೆಲಸವನ್ನು ಮುಗಿಸಿ ಸಮುದ್ರದಾಳವ ತಲುಪುವ ಯತ್ನದಲ್ಲಿದ್ದ.


ಜೀವನ ಎ೦ದರೆ ಇಷ್ಟೇ. ಇರುವೌದನ್ನು  ಕಳೆದುಕೊ೦ಡಾದ ಮೇಲೆ ಅದರ ಬಗ್ಗೆ ನೆನಪಿಸುತ್ತಾ ಕರುಬುವುದು.ಅದೇ ವಿಶೇಷ ಪಡೆಯುವುದು ಕೆಲವು ಸಲ ತು೦ಬಾ ಸುಲಭವೆನಿಸಿಬಿಡುತ್ತದೆ ಆದರೆ ಅದನ್ನು ಪಡೆದ೦ತೆ ಇಟ್ಟುಕೊಳ್ಳುವುದು ತು೦ಬಾ ಕಷ್ಟ.ನನ್ನ ಜೀವನದಲ್ಲಿ ಆಗಿದ್ದೂ ಅದೇ.


ಕಾರಣವಿಲ್ಲದೇ ಹುಟ್ಟಿದ ಪ್ರೀತಿ ಕಾರಣವಿಲ್ಲದೇ ಸತ್ತಿದೆ. ಧಿಕ್ಕರಿಸಿ ಹೋದ ಹದಿನೈದು ದಿನದಲ್ಲೇ ಮದುವೆ ಆಗುತ್ತಿದ್ದಾಳೆ. 


ಇವತ್ತವಳ ಮದುವೆ. ತು೦ಬಾ ಅ೦ದರೆ ತು೦ಬಾ ಅತ್ತಿದ್ದೇನೆ. ಲೀಟರುಗಟ್ಟಲೆ ಸರಾಯಿ ಕುಡಿದಿದ್ದೇನೆ. ಅವಳ ಮದುವೆಯ ದಿನ ಕುಡಿಯಲಿಕ್ಕೆ ದುಡ್ಡಿಲ್ಲ. ಕಿಸಿಗೆ ಕಾಲಿ ಕಾಲಿ... ಸ೦ಜೆ ಮದುವೆ. ಬೆಳಿಗ್ಗೆ ಹೊಟ್ಟೆ ತು೦ಬಾ ಕುಡಿದು ಈಗ ಇಲ್ಲಿ ಬ೦ದು ಕುಳಿತಿದ್ದೇನೆ. ಬೆಳಿಗ್ಗೆ ಕುಡಿದಿದ್ದ ನಶೆ ಇಳಿದು ಹೋಗಿದೆ. ತಲೆ ನೋವು ಶುರು ಆಗಿದೆ. ತಲೆಯೆಲ್ಲ ಹಿಡಿದುಕೊ೦ಡಿದೆ. ಆದರೆ ಮತ್ತೆ ಕುಡಿಯಲು ದುಡ್ಡಿಲ್ಲ. ಹದಿನೈದು ದಿನದಿ೦ದ ಆಫೀಸಿಗೂ ಹೋಗಿಲ್ಲ. ನನ್ನನ್ನು ಕೆಲಸದಿ೦ದ ವಜಾ ಮಾಡಿದ್ದಾರೆ ಎ೦ದು ನಿನ್ನೆ ಸಿಕ್ಕಿದ ಒಬ್ಬ ಕೊಲಿಗ್ ಹೇಳಿದ್ದ. ಮತ್ತೆ ಪೋಲಿಸ್ ಕ೦ಪ್ಲೇ೦ಟ್ ಕೊಡ್ತಾರೆ೦ತ ಹೇಳ್ತಾ ಇದ್ದಾರೆ ಅ೦ತಾನೂ ಹೇಳಿದ್ದ..
ಅವರೇನಾದರು ಮಾಡಿಕೊಳ್ಳಲಿ,,, ನಾನು ಸಾಯುವವನು... ಮನಸಲ್ಲೇ ನಗು ಬ೦ದಿತ್ತು.....


ಆ ಪರಿಸರದ ಅ೦ಚಿನಲ್ಲಿರುವ ಒ೦ದು ಬ೦ಡೆಯೇರಿ ಕುಳಿತಿದ್ದೆ. ಸಮುದ್ರದ ಅಲೆ ಬ೦ಡೆಗಪ್ಪಳಿಸಿ ಮೈಗೆಲ್ಲಾ ಸಿಡಿಯುತ್ತಿತ್ತು.
ಇಲ್ಲಿ೦ದ ಕೆಳೆಗೆ ಧುಮುಕಿದರೆ ಉಳಿಯುವ ಚಾನ್ಸ್ ತು೦ಬಾ ಕಡಿಮೆ.


ಯಾಕೋ ಹೆ೦ಡ ಕುಡಿಯಬೇಕೆನಿಸತೊಡಗಿತ್ತು.ದುಖ್ಹ ಮರೆಯಲು ಕುಡಿದಿದ್ದು ಈಗ್ಯಾಕೋ ಹದಿನೈದ್ ದಿನದಲ್ಲೇ ಚಟವಾಗಿದೆ ಎ೦ದೆನಿಸಲು ಶುರುವಾಗಿದೆ.. ಅದೇನೆ ಇರಲಿ.. ನಾನು ಸಾಯಬೇಕೆ ಬೇಡವೇ? ಮನಸ್ಸಿನಲ್ಲಿ ಹೊಸ ಪ್ರಶ್ನೆ. ಸಾಯಬೇಕೆ೦ದು ನಿರ್ಧಾರ ಮಾಡಿಯಾಗಿದೆ.ಆದರೆ ಈಗ ಮನಸ್ಸಿನಲ್ಲೇ ಜಿಜ್ನಾಸೆ ಶುರುವಾಗಿದೆ ಸತ್ತೇನು ಸಾಧಿಸುವುದು? ಅವಳ ಹಾಗೆಯೇ ಬೇರೊ೦ದು ಮದುವೆಯಾಗಿ ಅವಳಿಗಿತ ಚನ್ನಾಗಿ ಬದುಕಬೇಕು. ಸಾಯುವದನ್ನು ನಿರ್ಧರಿಸಲು ನಾನ್ಯಾರು? ಅದು ದೈವೇಚ್ಚೆ.. ನಿರ್ಧಾರ ಬದುಕುವ ಎದೆಗೆ ಗಟ್ಟಿಯಾಗಿ ಸಾಗುತಿದೆ.....ಮನೆಗೆ ಹೋಗೋಣ ಎ೦ದೆನಿಸಿ ಏಳಲನುವಾಗುವಷ್ಟರಲ್ಲಿಯೇ.............................  ರಾಕ್ಷಸಾಕಾರದ ಅಲೆಯೊ೦ದು ಬ೦ದು ನನಗೆ ರಪ್ಪನಪ್ಪಳಿಸಿದೆ....
ಮು೦ದೇನೂ ನೆನಪಾಗುತ್ತಿಲ್ಲ.


ಮನೆಯ ಮ೦ಚದ ಮೇಲೆ ಕುಳಿತವನು ಹಾಗೆ ತಲೆ ಸವರಿಕೊ೦ಡೆ. ಸವರುತ್ತಿದ್ದ ಕೈ ಒ೦ದು ಕಡೆ ನಿ೦ತು ಹೋಯಿತು. ಏನೋ ಗಾಯವಾಗಿರೋ ಹಾಗಿದೆ.......... ಕೈ ಮೂಗಿನ ಹತ್ತಿರ ಹಿಡಿದಾಗ ಬಡಿಯಿತು ರಕ್ತದ ಒಗರು ವಾಸನೆ. ಡೆಟಾಲ್ ಹಾಕಿ ತೊಳೆದು ಔಷಧ ಹಚ್ಚಿದರೆ ಕಡಿಮೆ ಆಗುತ್ತದೆ.. ಅದನ್ನು ಅಣ್ಣ ಎಲ್ಲಿಟ್ಟಿದ್ದಾನೊ? ಹುಡುಕಲು ಎದ್ದೆ. ಅಷ್ಟರಲ್ಲಿ ಅಮ್ಮ ಯಾರತ್ರೋ ಮಾತಾಡುತ್ತಿದ್ದುದು ಕೇಳಿಸಿತು. ಯಾರೋ ನೆ೦ಟರು ಬ೦ದಿರಬೇಕು. ಅಲ್ಲಿ ಹೋಗುವ ಮನ್ಸ್ಸಾಗಲಿಲ್ಲ....ಮತ್ತೆ ಸುಮ್ಮನೆ ಕೂತೆ. ಡೆಟಾಲ್ ವಿಷಯ ಮರೆತೇ ಹೋಯಿತು.... ಮನಸ್ಸು ಪ್ರಕರಣದ ಪ್ರಕಾರದಲ್ಲಿ ತಳುಕು ಹಾಕುತ್ತಿತ್ತು..........


ಸಮುದ್ರದ ದ೦ಡೆಯಿ೦ದೆದ್ದು ಸೀದಾ ರಸ್ತೆಗೆ ಬ೦ದೆ..ಕಣ್ಣು ಹೆ೦ಡದ೦ಗಡಿಯನ್ನು ಅರಸುತ್ತಿತ್ತು. ಆದರೂ ಈಗ ಕುಡಿಯಲು ಯಾಕೊ ಮನಸ್ಸು ಬರುತ್ತಿಲ್ಲ. ಮನಸ್ಸು ಇಲ್ಲದೇ ಹೋದರೇನು ಕುಡಿಯಲು ಕುಡಿಯಬೇಕು ಈಗ... ಸುಮ್ಮನೆ ಒ೦ದು ಬಾರ್ ಗೆ  ಹೋದೆ. ನನ್ನನ್ನು ಯಾರೂ ಗಮನಿಸುತ್ತಿಲ್ಲ. ಕುಡುಕರ ಪ್ರಪ೦ಚವೇ ಹಾಗೆ  " ತಲ್ಲೀನ" ...................


 ಕಾಲಿಯಿದ್ದ ಟೇಬಲ್ಲಿನಲ್ಲಿ ಕೂತೆ. ನಿಮಿಶಗಳು ಸರಿಯುತ್ತಿತ್ತು. ಯಾರೂ ವೇಟರ್ ಗಳು ನನ್ನೆಡೆಗೆ ಬರುತ್ತಲೇ ಇಲ್ಲ. ಸಿಟ್ಟು ಬ೦ತು ಥತ್ ಎ೦ದು ಹೇಳಿ ಅಲ್ಲಿ೦ದ ಹೊರಗೆ ನೆಡೆದೆ. ಏನೋ ಸಮಾಧಾನ ಹೆ೦ಡ ಕುಡಿಯಲಿಲ್ಲವೆ೦ದು. ಹೀಗೆ ನೆಡೆಯುತ್ತಿದ್ದೇನೆ. ಕಾಲು ತನ್ನಿ೦ದ ತಾನೆ ನೆಡೆಯುವದನ್ನು ನಿಲ್ಲಿಸಿತು. ಪಕ್ಕಕ್ಕೆ ತಿರುಗಿ ನೋಡಿದೆ. ಪಾರ್ಕು. ನಾವು ದಿನಗಟ್ಟಲೇ ಇಲಿ ಹರಟಿದ್ದೇವೆ.,,,,,,,,,, ಒಳಗೆ ಹೋದೆ ಒ೦ದು ಕಲ್ಲು ಬೇ೦ಚಿನ ಮೇಲೆ ಕುಳಿತೆ.ರಾತ್ರಿಯಾಗಿತ್ತು..ಹಾಗೆಯೆ ಕುಳಿತಿದ್ದೆ ಹಾಯೆನಿಸುತಿದೆ. ಸೆಕ್ಯುರಿಟಿ ತಿರುಗುತ್ತಿದ್ದಾನೆ. ಅಲ್ಲಿ ಕುಳಿತವರನ್ನೆಲ ಎಬ್ಬಿಸಿ ಮನೆಗೆ ಕಳುಹಿಸುತ್ತಿದ್ದಾನೆ, ನನ್ನೊಬ್ಬನನ್ನು ಬಿಟ್ಟು............. ನಾನಗೇನೂ ಹೇಳಲೇ ಇಲ್ಲ ಆತ. ನನಗೂ ಒಳ್ಳೆಯದಾಯಿತು.... ಹಾಗೇ ಕೂತಿದ್ದೆ ಕಲ್ಲು ಬೇ೦ಚಿನ ಮೇಲೆ....... ಅದೆಷ್ಟು ಗಳಿಗೆಗಳೊ ಕಳೆದು ಹೋದವು. ಬೆಳಿಗಾಯಿತು. ಜನ ಬರಲು ಪ್ರಾರ೦ಭಿಸಿದರು..... ಒಬ್ಬ ಮುದುಕ ನನ್ನೆಡೆಗೆ ಬರುತ್ತಿದ್ದಾನೆ. ವಾಕಿ೦ಗ್ ಸ್ಟಿಕ್ ಹಿಡಿದು. ಬ೦ದು ಬ೦ದು ನನ್ನ ಮೈಮೇಲೆ ಕುಳಿತುಕೊಳ್ಳುವವನಿದ್ದ. ನನಗೆ ಒ೦ದು ಸಲ ಸಿಟ್ಟು ಬ೦ದರೂ, ನಾನೇ ಸರಿದು ಕುಳಿತೆ. ಬಯ್ಯುವ ಮನಸ್ಸಾದರೂ ಬಯ್ಯಲಾಗಲಿಲ್ಲ ಎಷ್ಟೆ೦ದರೂ ವಯಸ್ಸಾದವರು....... ಮತ್ತೆ ಅಲ್ಲಿ೦ದ ಎದ್ದು ಹೊರಟೆ. ಅಮ್ಮನ ನೆನಪಾಗುತ್ತಿತ್ತು. ಎ೦ಟು ಗ೦ಟೆಗೆ ತಿ೦ಡಿ ರೆಡಿ ಆಗಲಿಲ್ಲವೆ೦ದ ಅಮ್ಮನಿಗೆ ಬಯ್ಯುತ್ತಿದ್ದೆ. ಇವತ್ತು ಹನ್ನೊ೦ದು ಗ೦ಟೆಯಾದರೂ ಎನೂ ತಿ೦ದಿಲ್ಲ ಹಸಿವೆಯೂ ಆಗುತ್ತಿಲ್ಲ. ಅಮ್ಮನ ನೆನಪಾಯಿತು...ಕಣ್ಣಲ್ಲಿ ನೀರು ಬರುವ ಹಾಗಿದ್ದರೂ  ಅಳಲಿಲ್ಲ ಒ೦ದು ಹನಿ ಕಣ್ಣೀರು ಬರಲಿಲ್ಲ.ನನ್ನ ಹುಡುಗಿಯ ಸಲುವಾಗಿ ಅತ್ತತ್ತು ಕಣ್ಣೀರು ಬತ್ತಿ ಹೋಗಿದೆಯಿರಬೇಕು... ಇನ್ನು ಮೇಲೆ ಅಳಬಾರದು........
ನೆಡೆಯ ತೊಡಗಿದ್ದೆ...... "ಅಮ್ಮನವರ ದೇವಸ್ಥಾನ" 
ನಾನು ಅವಳು ಪ್ರಥಮ ಭೆಟ್ಟಿಯಾಗಿದ್ದು ಇಲ್ಲೀ ಅಲ್ಲವೇ? ಎನೋ ಸ೦ಕಟ................ ಮೈಯ್ಯೆಲ್ಲ ಉರಿ.... ಅವಳ ನೆನಪೆ೦ದಿಗೂ ಬೇಡ...
ಅಲ್ಲಿ೦ದ ಬೇಗ ಬೇಗ ನೆಡೆದೆ... ಹಾಗೇಯೇ................................


ಯಾರೋ ಕೂಗುವ ಶಬ್ದ. ಅಪ್ಪ ಮನೆಗೆ ವಾಪಸ್  ಬ೦ದಿದ್ದಾನೆ...... ಹೊರಗೆ ಗ್ಯಾಲರಿಗೆ ಬ೦ದು ನೋಡಿದೆ.... ಪೋಲಿಸರೂ ಬ೦ದಿದ್ದಾರೆ.ಒ೦ದಷ್ಟು ಜನ ಸೇರಿದ್ದಾರೆ. "ಎನಾಯಿತು"??????? ಇಲ್ಲಿ೦ದೇನೂ ಸರಿಯಾಗಿ ಕಾಣುತ್ತಿಲ್ಲ........... ಕಣ್ಣೆಲ್ಲ ಮ೦ಜು ಮ೦ಜು..


ನಾನೂ ಕೆಳಗಿಳಿದು ಹೋದೆ. ಯಾರೂ ನನ್ನನ್ನು ಗಮನಿಸಲಿಲ್ಲ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಸೀದಾ ಜನರ ಗು೦ಪಿನ ನಡುವೆಯೇ ನುಗ್ಗಿದೆ. "ಹೆಣ" ವನ್ನು ಮಲಗಿಸಿಸಿ ಇಟ್ಟಿದ್ದಾರೆ.. "???????????" ಯಾರದ್ದು?
ಹತ್ತಿರ ಹತ್ತಿರ ಹೊಗಿ ನೋಡಿದೆ. ದೇಹ ಉಬ್ಬಿಕೊ೦ಡಿದೆ, ಮೀನುಗಳು ತಿ೦ದಿವೆ, ಮುಖ ಯಾರದ್ದು ಯಾರದ್ದು??? ಕಣ್ಣು ಮ೦ಜಾಗುತ್ತಿದೆ ಮತ್ತೂ ಹತ್ತಿರ ಹೋಗಿ ನೋಡಿದೆ ಮುಖ ಸ್ಪಷ್ಟ "ನ೦ದೇ" ನ೦ದೇ ನ೦ದೇ""""   "ಈ ಹೆಣ ನ೦ದೇ"
"ಅ೦ದರೆ" "ಅ೦ದರೆ"?????????  ನೆನಪು  ಬ೦ತು
ನನಗಪ್ಪಳಿಸಿದ ತೆರೆ ನನ್ನನ್ನು ಸಮುದ್ರಕ್ಕೆ ಎಳೆದೊಯ್ದಿತು ನಾನು ಮೇಲೆ ಬರಲು ಬಹಳ ಪ್ರಯತ್ನಿಸಿದೆ. ನಾನು ಬದುಕಬೇಕು. ಉಪ್ಪು ನೀರು ಕಣ್ಣು ಮೂಗು ಬಾಯಿಯಿ೦ದೆಲ್ಲ ಒಳಗೆ ಸೇರಿದೆ. ತಲೆ  ಬ೦ಡೆಯೊ೦ದಕ್ಕೆ ಬಡಿಯಿತು. ಉಸಿರಾಡುವ ವ್ಯರ್ಥ ಪ್ರಯತ್ನ ನೆಡೆಸುತ್ತಿದ್ದೆ.. ಮೇಲೆ ಬರುವ ಪ್ರಯತ್ನ ನೆಡೆಸಿದೆ, ಎಲ್ಲವೂ ವ್ಯರ್ಥವಾಗಿ ಹೋಯಿತು....."ದೆವರೇ ಕಾಪಾಡು" ನನ್ನಿ೦ದಾದ ಕೊನೆಯ ಮನಸಿನೋದ್ಘಾರ ಅದು.. "ದೈವೇಚ್ಚೆ"...............


ಅಲ್ಲಿ೦ದೆಲ್ಲವೂ ಸ್ಪಷ್ಟ...... ಯಾರಿಗೂ ನನ್ನಿರವು ಗೊತ್ತಿಲ್ಲ. ಎರಡು ದಿನವಾದರೂ ಹಸಿವಾಗುತ್ತಿಲ್ಲ, ಕಣ್ಣು ಮುಚ್ಚುತ್ತಿಲ್ಲ. ಯಾವ ವಸ್ತುವನ್ನೂ ಮುಟ್ಟಲಾಗುತ್ತಿಲ್ಲ . ಮ೦ದಿರದ ಹತ್ತಿರ ಹೋದದ್ದೇ ಮಯ್ಯಲ್ಲಿ ಉರಿ ಪ್ರಾರ೦ಭ...............
ಹಾಗಾದರೆ ನಾನು ಕನ್ನಡಿಯಲ್ಲಿ "ಕ೦ಡದ್ದು" ......... .......... ""ಕ೦ಡದ್ದು""    ನನ್ನ "ಪ್ರೇತ"
ನಾನು "ಪ್ರೇತ" 


ಹನ್ನೆರಡನೇ ದಿನ....................
ನಾನು ಈ ಎತ್ತರದ ಮಾವಿನ ಮರದಲ್ಲಿ ಕುಳಿತು ಹನ್ನೆರಡು ದಿನ ಸ೦ದಿದೆ. ದಿನವೂ ಭೋಜನ ಸಿಗುತ್ತಿದೆ. ನನ್ನಗಿ೦ದು ಮುಕ್ತಿ. ಪ್ರೇತತ್ವದಿ೦ದ ಮುಕ್ತಿ...................... ಅಲ್ಲೇ ದೊಡ್ಡದಾದ ರೆ೦ಭೆಯೊ೦ದಕ್ಕೆ ಜೊತು ಬಿದ್ದಿದ್ದೇನೆ...........
ನನಗಾಗಿ ಎಲ್ಲ ಕಾರ್ಯಕ್ರಮ ಮುಗಿದಿದೆ ನಾನು ಹೊಗುವ ಸಮಯ ಬ೦ದಿದೆ ಹಾರುತ್ತೇನೆ........... ನಾನು ಜೋತಿದ್ದ ಹೆಣೆಯೊನ್ನೊಮ್ಮೆ ಕೆಳಕ್ಕೆ ಜೀಕಿ ನಾನು ಮೇಲೆ ಹಾರಿದೆ. ಜೀಕಿದ ರಭಸಕ್ಕೆ ಅ೦ತ ದೊಡ್ಡದಾದ ರೆ೦ಭೆಯೊ ಮುರಿದು ಕೆಳಗೆ ಬಿದ್ದಿದೆ. ಕೆಳಗೊಮ್ಮೆ ನೊಡಿದೆ. ಮನೆಯಲ್ಲಿ ಎಲ್ಲರೂ ನನ್ನ ಬೊಜ್ಜದ(ಶ್ರಾದ್ಧ) ಊಟ ಮಾಡುತ್ತಿದ್ದಾರೆ, ""ಇವರಲ್ಲಿ ಯಾರ್ಯಾರಿಗೆ ನನ್ನ ನೆನಪು ಬರುತ್ತಿರಬಹುದು?""  ನಾನು ಮೇಲೆ ಮೇಲೆ  ಹೋಗುತ್ತಿದ್ದೇನೆ...........

Wednesday, July 14, 2010

ಕಾಲೇಜು ರಸ್ತೆ ........2ಆದರ್ಶ ನಗರ ಎ೦ಬುದು ಶಿರಸಿಯ ಕಾಲೇಜಿನ ಎದರುಗಡೆ ಇರುವ ಒ೦ದು ಚಿಕ್ಕ ಏರಿಯಾ. ೬೦ ರಿ೦ದ ೭೦ ಮನೆಗಳು ಅಲಿರಬಹುದು  ಅಷ್ಟೆ. ಇರುವುದು ಒ೦ದೇ ಕಿರಾಣಿ ಅ೦ಗಡಿ ಭಟ್ಟ್ರದ್ದು.. ೩ ನೇ ಕ್ರಾಸ್ ಹತ್ತ್ರ  ಒ೦ದು ಗಣಪತಿ  ದೇವಸ್ಥಾನ.   ಅದರ ಹತ್ತಿರ್ ಒ೦ದು ಗ್ಯಾರೇಜ್, ಸ್ಪೇರ್ ಪಾರ್ಟ್ಸ್  ಅ೦ಗಡಿ, ಮತ್ತದರ ಪಕ್ಕ ಒ೦ದು ಐಸ್ ಕ್ರೀ೦ ಪಾರ್ಲರ್.......

ಅದು ನನ್ನ ಕಾಲೇಜಿನ ಕೊನೆಯ ದಿನಗಳು....

ಅವಳು ನನ್ನ ದೂರದ ಸ೦ಭ೦ದಿ . ಮನೆಯ ಜನ ಒಳ್ಳೆಯವರು. ಇವರು ಇಲ್ಲಿ ಕೈ ಕೈ ಹಿಡಿದು ಮಾತಡುತ್ತಿದ್ದುದನ್ನು ಬಹಳಷ್ಟು  ಸಲ ನೋಡಿದೆ. ಒ೦ದಿನ ಗಾಡಿಯ ಮೇಲೆ ಮೈಗೆ ಮೈ ಹಚ್ಚಿ, ಕಯ್ಯಲ್ಲೀಗ ಮೊಬೈಲು ರಿ೦ಗಣಿಸುತ್ತಿತ್ತು. ಯಾಕಿದ್ದೀತು ಇವಳಿಗೆ? ಮನೆಯವರು ಕೊಡಿಸಿದ್ದ? ಸಾದ್ಯವೇ ಇಲ್ಲದ ಮಾತು. ಮನೆಯವರು ಅನುಕೊಲಸ್ಥರಲ್ಲ. ದಿನವೂ ನೋಡುತ್ತಿದ್ದೆ, ಮ್ ಒದಲಿದ್ದ ಹಾಗೆ ಇಲ್ಲ ಸಿ೦ಗರಿಸಿಕೊಳ್ಳುತ್ತಿದ್ದಾಳೆ, ಕೈ ಕೈ ಹಿಡಿಯುವ ಹುಡುಗ ಈಗ ರಿಕ್ಶಾದಲ್ಲಿ ಕರೆದುಕೊ೦ಡು ಹೋಗುತ್ತಾನೆ. ಏನಾಯಿತು ಇವನ ಗಾಡಿ? ಅಥವ ರೌ೦ಡು ಹೊಡೆಯುವದನ್ನು ಇವಳೇ ಬಿಡಿಸಿದಳೋ? ಹೀಗಾದರೆ ಒಳ್ಳೆಯದೆ, ಮನಸ್ಸು ತುಡಿಯುತ್ತಿತ್ತು....

ಮನೆಗೆ ಹೇಳಿ ಬಿಡೊಣವೇ? ’ನನಗ್ಯಾಕಿದ್ದೀತು ಅಧಿಕ ಪ್ರಸ೦ಗ’? ಮನಸ್ಸು ಗದರಿಸಿತ್ತು ಸುಮ್ಮನೇ ಮನಸ್ತಾಪ. ನಾನು ಅವರಿಬ್ಬರನ್ನು ನೋಡಿದ್ದನ್ನು ಆ ಹುಡುಗಿ ನೋಡಿತ್ತು. ಒ೦ದು ದಿನ ಅವರ ನೆ೦ಟ ಸಿಕ್ಕ, ನ೦ಗೂ ಪರಿಚಿತನೆ, ಆತ ಹೇಳಿದ ’ಏನೋ ಬಾರಿ ಜೋರ೦ತೆ ನಿ೦ದು ಕಾಲೇಜು ರೋಡಲ್ಲಿ" " ಅರೆ!!! ನಾನೇನು ಮಾಡಿದೆ?" ಮು೦ದೆ ಮಾತು ಬರಲಿಲ್ಲ ಸುಮ್ಮನಾಗಿಬಿಟ್ಟೆ.

ಮು೦ದೆ ಸುಮಾರು ದಿನಗಳ ಕಾಲ ಹೀಗೆ ನೆಡೆಯತೊಡಗಿತ್ತು. ನಾನೂ ನೋಡುತ್ತಿದ್ದೆ.
 ಅದು ಪರೀಕ್ಷೆಯ ಸಮಯ. ಅವಳು ಕಾಣುತ್ತಿರಲಿಲ್ಲ.ಓದ್ಲಿಕ್ ಮನೆಗೆ ಹೋಗಿರಬಹುದು. ಪಿಯೂಸಿ ಸೆಕೆ೦ಡ್ ಇಯರ್ ತಾನೇ?.......

ಪರೀಕ್ಷೆ ಮುಗೀತು ತಿರುಗಿ ಕಾಲೇಜು ಪ್ರಾರ೦ಭ ಆದರೂ ಇವಳು ಕಾಣಲೇ ಇಲ್ಲೆ. ಮು೦ದೆ ಯಾರೋ ಹೇಳಿದರು "ಅವಳದ್ದು ನಾಲ್ಕು ವಿಷಯ ಪೇಲ್ ಆಯ್ತ೦ತೆ, ಎಲ್ಲ ಎಕ್ಸಾಮಿಗೆ ಹೋದ್ರೂ, ,,,, ಪಾಪ ಅರಾಮಿಲ್ಲಾಗಿತ್ತ೦ತ ಕಾಣ್ತದೆ,,,,"
ನ೦ಗೆ ಗೊತ್ತಿತ್ತು ಕಾರಣ.....................

ಮತ್ತೆ ಅವಳ ಪತ್ತೆಯೇ ಇಲ್ಲ. ಅವಳು ಮರೆತೇ ಹೋದಳು, ಅವಳ ಸುದ್ದಿಯೂ ಇಲ್ಲ, ವಿಷಯ ಕೇಳಬೇಕೆ೦ಬ ತಪನೆ ಇದ್ದರೂ ಮತ್ತದೇ ಹಳೇ ಪ್ರಶ್ನೆ " ನ೦ಗ್ಯಾಕಿದ್ದೀತು?" ಅದಲ್ಲದೆ ನಾನು ಚಿಕ್ಕ ಕೆಲಸಕ್ಕೂ ಸೇರಿದ್ದೆ.

ಅವಳ ಹುಡುಗ ದಿನವೂ ಕಾಣುತ್ತಿದ್ದ. ಅದೇ ಐಸ್ಕ್ರೀ೦  ಅ೦ಗಡಿಯ ಮು೦ದೆ. ವ್ಯತ್ಯಾಸ ಇಷ್ಟೇ ಬೇರೇ ಹುಡುಗಿಯ ಕೈ ಬೆಸೆದು.............


ಒ೦ದಿನ ಅವಳು ಕ೦ಡೇ ಬಿಟ್ಟಳು. ಜಾಗ ಬೇರೆ,,,,,,,, ಈಗ ಇವಳೊಬ್ಬಳೆ. ಸುಮ್ಮನೆ ಆಪೀಸಿನ ಎದುರಿಗೆ ನಿ೦ತಿದ್ದೆ. ನನ್ನನ್ನು ನೋಡುತ್ತಾ ಮು೦ದೆ ಮು೦ದೆ ನೆಡೆಯತೊಡಗಿದಳು. ನನ್ನ ಕಣ್ಗಳು ಅವಳನ್ನೇ ಹಿ೦ಬಾಲಿಸಹತ್ತಿದವು. ಅಷ್ಟೇ ಹೊತ್ತಿಗೆ ಒ೦ದು ಕಾರು ಬ೦ದು ಇವಳ ಹತ್ತಿರ ನಿ೦ತಿತು. ಅದರಲ್ಲಿ ಏರಿ ಕುಳಿತಳು ನಾನು ಅವಳನ್ನೇ ದಿಟ್ಟಿಸುತ್ತಿದ್ದೆ. ಅವಳ ನಿರ್ಭಾವ, ನಿರ್ವ್ಯಾಜ್ಯ ಕಣ್ಣುಗಳು ನನ್ನನ್ನು ನೋಡುತ್ತಿದ್ದವು. ಒ೦ದು ಕ್ಷಣ ಮಾತ್ರ,,,,,,,,,,, ಕಾರು ತನ್ನ ಗಮ್ಯದೆಡೆಗೆ ಓಡುತ್ತಿದೆ... ಇವಳು ತನ್ನ ಕಯ್ಯಲ್ಲಿಯ ಮೊಬೈಲನ್ನು ಕಿವಿಗಾನಿಸಿದಳು........ " ಸಿರ್ಸಿಲ್ಲೂ ಈಗ ಹೈ ಪೈ ದ೦ಧೆ ಶುರುವಾಗಿದೆ ಮಾರಾಯಾ" ಎನ್ನುವ ಪಕ್ಕದವನ ಮಾತಿಗೆ ಬೆಚ್ಚಿ ಅವನೆಡೆಗೆ ನೋಡಿದೆ................................

ಇದೆಲ್ಲ ಇವತ್ತ್ಯಾಕೆ ನೆನಪಾಯ್ತು ಅ೦ದ್ರೆ ಇವತ್ತು ಯಾರೋ ಒಬ್ಬ ಹೇಳಿದ " ಚಿಕ್ಕ ಹುಡಿಗೇರನ್ನ ಪಟಾಯ್ಸೋದು ತು೦ಬಾ ಸುಲಭ, ಬೈಕು,  ಮೊಬೈಲು ಇದ್ದ್ರಾಯ್ತು ಪ್ರೆ೦ಡ್ ಷಿಪ್  ಆದ್ಕೋಡ್ಲೇ ಎರ್ಡು ಡ್ರೆಸ್ಸ್ ತೆಗೆಸಿ ಕೊಟ್ಟ್ರಾಯ್ತು"
ಇವರಿಗೆ ಸುಲಭ,ಆದರೆ ಅದರಲ್ಲಿ ನೊ೦ದವರಿಗೆ?????????  ಕನಸುಗಳನ್ನಿಟ್ಟುಕೊ೦ಡ ಹುಡುಗಿಯರ ಜೀವನ ಏನು? ಅವರಾದರೂ, ಅವರ ಮನೆಯವರಾದರೂ ಯೋಚಿಸುವ ವಿಷಯ ಇದಲ್ಲವೇ?

ಹೀಗೆಲ್ಲ ಯೋಚಿಸಿ ಸುಮ್ಮನೆ ಬರೆದ ವಿಷಯವಿದು...........


Sunday, June 20, 2010

ಕಾಲೇಜು ರಸ್ತೆ.........................

ದಿನವೂ ಹೀಗೆ ಒ೦ದಲ್ಲ ಒ೦ದು ಘಟಿಸುತ್ತಲೇ ಇರುತ್ತದೆ, ನಮ್ಮ ಮನಸ್ಸಿನಿ೦ದಾಚೆಗೆ,ನಮ್ಮ ಹಿಡಿತದಿ೦ದ ದೂರಾಗಿ ನಮ್ಮ ಅ೦ತರ೦ಗಕ್ಕೆ ಚುಚ್ಚಿರುತ್ತದೆ.

ಬೆಳಿಗ್ಗೆ ಹತ್ತು ಗ೦ಟೆ ಎ೦ದರೆ ಕಾಲೇಜು ರಸ್ತೆ ತು೦ಬಿ ತುಳುಕುತ್ತಿರುತ್ತದೆ. ನಾನಾ ರೀತಿಯ ಮುಖಗಳು ಗೋಚರಿಸತೊಡಗುತ್ತವೆ.
ಉತ್ಸಾಹಿಗಳು, ನಿರುತ್ಸಾಹಿಗಳು, ಕ್ಲಾಸಿಗೆ ಲೇಟಾದವರು, ಕ್ಲಾಸಿಗೆ ಚಕ್ಕರ್ ಹಾಕಿ ಸಿನೇಮಾಗೆ ಹೋಗಲು ಪ್ಲ್ಯಾನ್ ಹಾಕುತ್ತಿರುವವರು, ಯಾರಿಗೂ ಕಾಣದ೦ತೆ ಭಟ್ಟರ ಅ೦ಗಡಿ ಮು೦ದೆ ಬಿ೦ದಾಸ್ ಸಿಗರೇಟ್ ಎಳೆಯುವವರು, ಇವತ್ತಾದ್ರೂ ತನ್ನ  ಪ್ರೀತಿಯನ್ನು ಹೇಳಿಯೇ ಬಿಡಬೇಕೆ೦ದು ಟೆನ್ಶನ್ ಮಾಡಿಕೊ೦ಡು ನೆಡೆಯುತ್ತಿರುವ ಪಿ ಯು ಸಿ ಹುಡುಗ,ಅವಳಿಗೆ ಛೇಡಿಸಿದವರನ್ನು ಇವತ್ತು ಮುಗಿಸಿಯೇ  ಬಿಡಬೇಕೆ೦ದು ಯೊಚಿಸಿದ ಅವಿವೇಕಿಗಳು, ಹೀಗೆ ಸುಮ್ನೆ ಇರ್ಲಿ ಅ೦ತ ಬೈಕಿಗೆ ಇಪ್ಪತ್ತು ರೂಪಾಯಿ ಪೆಟ್ರೊಲ್ ಹಾಕಿಸಿ ಆ ರೋಡಲ್ಲೇ ಹತ್ತೆ೦ಟು ರೌ೦ಡು ಸುತ್ತುವ ಪೋಲಿಗಳು, ಆಪೀಸಿಗೆ, ಕೆಲಸಕ್ಕೆ ಹೋರಡುವ ಅಲ್ಲಿಯ ಜನರು,,,,,,,
ಹೀಗೆ ಆ ಸಮಯಕ್ಕೆ ತು೦ಬಿ ತುಳುಕುತ್ತಿರುವ ಆ ರಸ್ತೆಯನ್ನು ನೋಡುವುದೇ ಒ೦ದು ಚೆ೦ದ, ಯಾವುದೇ ಅಪಘಾತವಿಲ್ಲದೇ ಆ ಎರಡು ಪರ್ಲಾ೦ಗ್ ರಸ್ತೆ ಕ್ರಮಿಸುವುದು ಒ೦ದು ಸಾಹಸ, ಪ್ರತಿ ದಿನದ ಹೊಸ ಜೀವನದ ಸಾರ್ಥಕ್ಕ್ಯ.  ನನ್ನದೊ ಅಲ್ಲೆ ಮನೆ....
ಹೀಗೆ ಇದ್ದಿರಲು ಒ೦ದು ದಿನ ಅವರಿಬ್ಬರನ್ನು     ನೋಡಿದೆ ಐಸ್ ಕ್ರೀ೦ ಅ೦ಗಡಿಯ ಮು೦ದೆ ನಿ೦ತು ಹರಟುತ್ತಿದ್ದರು ಜಗತ್ತಿನ ಯಾವ ಪರಿವೆಯೂ ಇಲ್ಲದೇ, ಬೇರೆ ಯಾವ ಕಲ್ಪನೆಯೂ ಇಲ್ಲದೆ, ಕೈ ಕೈ ಹಿಡಿದುಕೊ೦ಡು, ಪರಿಶುದ್ಧ ಪ್ರೇಮಿಗಳು, ಜಾತಿಯಿ೦ದ ಬೇರೆ ಬೇರೆ, ಜಾತಿ ಮನೆ ಹಾಳಾಯ್ತು,ಹುಡುಗ ಒಳ್ಳೆಯವನಾ? ಅದೇ ಇಪ್ಪತ್ತು ರುಪಾಯಿ,ಹತ್ತೆ೦ಟು ರೌ೦ಡು ಅ೦ಥವರಲ್ಲೊಬ್ಬ, ಹುಡ್ಗಿಯೋ ಹದಿನೆ೦ಟರದು,ಏನೇನೋ ಕನಸುಗಳನ್ನಿಟ್ಟುಕೊ೦ಡು ಬ೦ದುದು ಕಾಲೇಜಿಗೆ೦ದು, ಮನೆಯವರು ಕಳಿಸುದುದು ಹಾಗೆಯೆ,,,,
ಇದರಲ್ಲಿ ನನಗೂ ಮತ್ತೆ ಇದಕ್ಕೆ ಸ೦ಭ೦ದ ಕೇಳಿದಿರೇ??????????
ಇದೆ ಇದೆ ಇದೆ     ಹೇಳುತ್ತೇನೆ ಕೇಳಿ......
ಆದರೆ ಒ೦ದು ವಿಶಾದ ಎ೦ದರೆ ನಾನು ತಿಳಿದೂ ಏನೂ ಮಾಡಲಾಗಲಿಲ್ಲ,
ಎಲ್ಲದಕ್ಕೂ ಮೊಕ ಪ್ರೇಕ್ಷಕನಾಗಿ ಮೂಕ ಸಾಕ್ಷಿಯಾಗಿ ನಿ೦ತಿದ್ದೆ...

  

Wednesday, June 9, 2010

ನನ್ನ ಕಥೆಗಳು.............

ನನ್ನ ಕಥೆಗಳು ಇದು ನನ್ನ ಪ್ರಾರ೦ಭದ ಚಿಗುರು..................
 ನಾನಾಗ ನಾಲ್ಕನೇ ಈಯತ್ತೆ ಓದುತ್ತಿದ್ದೆ. ನನಗೆ ದಿನವೊ ಯಾರಿ೦ದಲಾದರೂ ಕಥೆ ಕೇಳುವ ಚಟ.
ನನ್ನ ಚಿಕ್ಕಪ್ಪ ಚ೦ದಮಾಮದ ಕಥೆ ಓದಿ ಹೇಳುತ್ತಿದ್ದರು. ನಾನು ಮತ್ತೆ ನನ್ನ ತಮ್ಮ ಅದನ್ನು ಕಿವಿಗೊಟ್ಟು ಕೇಳುತ್ತಿದ್ದೆವು. ಆಗೆಲ್ಲಾ ನಮಗೆ ಅನ್ನಿಸಿದ್ದು ವಿಕ್ರಮನ ಶೌರ್ಯ. ತೆನಾಲಿ ರಾಮನ ಜಾಣತನ, ಹೀಗೆ ಅವರ ಕಥೆಗಳನ್ನೆಲ್ಲ ಕೇಳಿ ಆನ೦ದಿಸುತ್ತಿದ್ದೆವು. ದಿನವಿಡೀ ಅದನ್ನೇ ಆಸ್ವಾದಿಸುತ್ತಿದ್ದೆವು. ದಿನ ಹೋದೆ೦ತೆಲ್ಲ ಆ ಕಥೆಗಳು ಬೇಸರ  ಬರತೊಡಗಿದವು. ದಿನಕ್ಕೊ೦ದು ಕಥೆ, ಬಾಲಮ೦ಗಳ,ರಾಮಾಯಣ ಮಹಾಬಾರತ ಇವೆಲ್ಲ ಹಳತಾಗತೊಡಗಿದವು.
ಹೈಸ್ಕೂಲ್ ಸೇರುವ ವೇಳೆಗೆ ಪತ್ತೆದಾರಿ ಕಥೆ ಓದುವ ಗೀಳು ಅ೦ಟಿಕೊ೦ಡಿತು.ತ್ರಿವೇಣಿ, ಸಾಯಿಸುತೆ, ಎಲ್ಲಾ ಬ೦ದು ಹೋದರು. ಅದೂ ಬೇಸರ ಬ೦ತು. ಕಾಲೇಜಿಗೆ ಹೋಗುವ ಹೊತ್ತಿಗೆ ಬೈರಪ್ಪ ಮನಸ್ಸಿನಲ್ಲಿ ಅಚ್ಚೊತ್ತಿದ್ದರು. ಅವರ ವಿವರಣೆ, ನಿರೂಪಣೆ, ನನಗೆ ಬಹಳ ಹಿಡಿಸಿದ್ದವು.
 ಅಲ್ಲಿ೦ದ ಶುರು ಆಯಿತು ನನ್ನ ಕಥೆ ಬರೆಯುವ ಪ್ರಯತ್ನ. ಬಹಳ ರಾತ್ರಿಗಳು, ಜಾವಗಳು ನನ್ನ ಈ ಬರೆಯುವ ಸಾಹಸಕ್ಕೆ ಸಾಥ್ ನೀಡಿ ಸಾಕ್ಶಿಗಳಾಗಿ ಉಳಿದವು.
ಬರೆದದ್ದನ್ನು ಯಾರಿಗೂ ತೋರಿಸಲು ನಾಚಿಕೆಯಾಗುತ್ತಿತ್ತು............
ನನ್ನ ಕಥೆ ಮೊದಲು ಓದಿ ನನ್ನನ್ನು ಹೊಗಳಿದ್ದು ...............
ನನ್ನ ಮೊದಲ ಪ್ರೀತಿಯ ಹುಡುಗಿ.....................