Monday, September 20, 2010

ನಾನು.......................!!!!!


ಮನೆಯ ಬಾಗಿಲಿನ ಎದುರಿಗೆ ನಿ೦ತಿದ್ದೆ. ಮನಸಿನಲ್ಲೇನೋ ಕಳವಳ, ಹ್ರದಯದಲ್ಲಿ ತಳಮಳ. ಎರಡು ದಿನ ಆಗಿತ್ತು ಮನೆಗೆ ಬರದೇ. ಬಾಗಿಲು ಸ್ವಲ್ಪವೇ ತೆರೆದಿದೆ. ಮನೆಯಲ್ಲೇನೋ ಗಡಿಬಿಡಿ ಮಾಡುತ್ತಿದ್ದಾರೆ. ಏನ೦ತ ಅರ್ಥವಾಗುತ್ತಿಲ್ಲ? ಒಳಗೆ ಹೋಗಲೋ ಬೇಡವೊ? ಹ್ರದಯದಲ್ಲಿ ಹೇಳಿಕೊಳ್ಳಲಾರದ೦ತ ಏನೋ ತಳಮಳ........
ಮನೆಗೆ ಹೋದರೆ ಅಪ್ಪ ಬಯ್ಯುತ್ತಾರೆ, ಹೊಡೆದರೂ ಹೊಡೆದರೆ........... ಯಾಕೆ೦ದರೆ ಅಪ್ಪನೇ ಹಾಗೆ. ತಾಳ್ಮೆ ಕಡಿಮೆ ಅವನಿಗೆ........ಮನೆಯ ಬಾಗಿಲು ತೆರೆದು ಕೊ೦ಡಿತು. ಅಪ್ಪ ಗಡಿಬಿಡಿಯಿ೦ದ ಹೊರ ಬಿದ್ದರು. ನಾನು ಅಲ್ಲೇ ಹೂವಿನ ಗಿಡದ ಮದ್ಯದಲ್ಲಿ ಸ್ವಲ್ಪ ಮರೆಯಾದೆ. ಅಬ್ಬಾ ಅಪ್ಪನಿಗೆ ನಾನು ಕಾಣಿಸಲಿಲ್ಲ. ಏನು ಗಡಿಬಿಡಿ ಮನೆಯಲ್ಲಿ? ನಾನು ಪ್ರೀತಿಯಲ್ಲಿ ಬಿದ್ದಿದ್ದು ಬಿದ್ದು ಸೋತಿದ್ದು  ಗೊತ್ತಾಗಿ ಹೊಯಿತೆ? ಏನೇನು ಪ್ರಶ್ನೆ ಕೇಳಬಹುದು ನನ್ನ ಹತ್ತಿರ ಈಗ.? ಎಲ್ಲಿಗೆ ಹೊಗಿದ್ದೆ ಎ೦ದು ಹೇಳುವುದು?
ಅಪ್ಪ ಪೋಲೀಸ್ ಕ೦ಪ್ಲೇ೦ಟ್ ಕೊಡಲಿಕ್ಕೇನಾದರೂ ಹೋಗಿರಬಹುದೆ?


ನಮ್ಮ ಮನೆ ಸ್ವಲ್ಪ ದೊಡ್ಡದೇ ಎ೦ದರೂ ತಪ್ಪಗಲಾರದು.ಇರುವುದು ಐದೇ ಜನ. ನಾನು, ಅಪ್ಪ, ಅಮ್ಮ, ಅಕ್ಕ, ಮತ್ತು ಅಣ್ಣ,
ನನ್ನ ಮತ್ತು ಅಣ್ಣನ ರೂಮು ಇರುವುದು ಮೇಲ್ಗಡೆ. ಅಪ್ಪನ, ಅಕ್ಕನ ರೂಮು ಇರುವುದು ಕೆಳಗಡೆ..
ನಾನು ಇದೇ ಸಮಯ ಎ೦ದು ಮನೆಯ ಒಳಗಡೆ ಕಾಲಿಟ್ಟೆ. ಒ೦ಥರಾ ಸ್ಮಶಾನ ಮೌನ ಮನೆಯಲ್ಲಿ. ಇಷ್ಟೊತ್ತು ಅಪ್ಪ ಗಲಾಟೆ ಮಾಡುತ್ತಿದ್ದರು. ಅಮ್ಮ ಮತ್ತು ಅಕ್ಕ ರೂಮಿನಲ್ಲಿ ಕೂತಿದ್ದಾರೆ. ಹಾಲ್ ನಲ್ಲಿ ಯಾರೂ ಇಲ್ಲ. ನನಗೆ ಅವರನ್ನು ಮಾತನಾಡಿಸುವ ಮನಸ್ಸಿಲ್ಲ. ನಾನು ಸೀದಾ ಮೇಲ್ಗಡೆ ಇರುವ ನನ್ನ ರೂಮಿಗೆ ನೆಡೆದೆ.. ಒ೦ದು ಸಲಕ್ಕೆ ಏನೊ ಶಾ೦ತಿ ಸಿಕ್ಕ ಅನುಭವ.. ಮೊನ್ನೆ  ಮನೆಯಿ೦ದ ಹೊರ ಹೋದದ್ದು ಈಗ ಬರುತ್ತಿದ್ದೇನೆ. ಎನೂ ತಿ೦ದಿಲ್ಲ ಒ೦ದು ದಿನ.. ಆದರೂ ಹಸಿವೆ ಆಗುತ್ತಿಲ್ಲ. ಇಡೀ ಶಹರ ಸುತ್ತಿದ್ದೇನೆ. ಏನೋ ತ್ರಪ್ತಿ ಇದೆ ಆದರೂ ಎನೋ ತಳಮಳ ಎದೆಯಲ್ಲಿ. . ಅಲ್ಲೆ ಇರುವ ಕನ್ನಡಿಯಲ್ಲಿ ಮುಖ ನೋಡಿದೆ. ಮುಖವೆಲ್ಲಾ ಬಿಳುಚಿ ಗೊ೦ಡಿದೆ. ಕಣ್ಣು ಗುಡ್ಡೆ ಹೊರಗೆ ಬ೦ದ೦ತಾಗಿದೆ. ಕಣ್ಣು ಕೆ೦ಪಡರಿದೆ. ಎಷ್ಟು ಕುರೂಪವಾಗಿ ಕಾಣುತ್ತಿದೆ ಮುಖ......... ಒ೦ದು ಕ್ಷಣ ಕಣ್ಣು ಮುಚ್ಹಲು ಪ್ರಯತ್ನಿಸಿದೆ. ಉಹುಮ್  ನಿದ್ರೆಯೂ ಬರುತ್ತಿಲ್ಲ. ಕಣ್ಣು ಮುಚ್ಚುತ್ತಿಲ್ಲ........ ಆದರೆ ಹಳೆಯದೆಲ್ಲ ನೆನಪಾಗತೊಡಗಿದೆ............... 


ಮನಸೆಲ್ಲ ಅವಳಲ್ಲೇ ಇತ್ತು. ದ್ರಷ್ಟಿ ಶೂನ್ಯದೆಡೆಗಾದರೂ ಕಡಲಲ್ಲಿ ಉಕ್ಕುತ್ತಿರುವ ಅಬ್ಬರದಲೆಗಳು ನನ್ನ ದ್ರಷ್ಟಿಯನ್ನು ತಮ್ಮ ಕಡೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದವು. 
ದಿನಕರ ಆಗಲೇ ತನ್ನ ದಿನದ ಕೆಲಸವನ್ನು ಮುಗಿಸಿ ಸಮುದ್ರದಾಳವ ತಲುಪುವ ಯತ್ನದಲ್ಲಿದ್ದ.


ಜೀವನ ಎ೦ದರೆ ಇಷ್ಟೇ. ಇರುವೌದನ್ನು  ಕಳೆದುಕೊ೦ಡಾದ ಮೇಲೆ ಅದರ ಬಗ್ಗೆ ನೆನಪಿಸುತ್ತಾ ಕರುಬುವುದು.ಅದೇ ವಿಶೇಷ ಪಡೆಯುವುದು ಕೆಲವು ಸಲ ತು೦ಬಾ ಸುಲಭವೆನಿಸಿಬಿಡುತ್ತದೆ ಆದರೆ ಅದನ್ನು ಪಡೆದ೦ತೆ ಇಟ್ಟುಕೊಳ್ಳುವುದು ತು೦ಬಾ ಕಷ್ಟ.ನನ್ನ ಜೀವನದಲ್ಲಿ ಆಗಿದ್ದೂ ಅದೇ.


ಕಾರಣವಿಲ್ಲದೇ ಹುಟ್ಟಿದ ಪ್ರೀತಿ ಕಾರಣವಿಲ್ಲದೇ ಸತ್ತಿದೆ. ಧಿಕ್ಕರಿಸಿ ಹೋದ ಹದಿನೈದು ದಿನದಲ್ಲೇ ಮದುವೆ ಆಗುತ್ತಿದ್ದಾಳೆ. 


ಇವತ್ತವಳ ಮದುವೆ. ತು೦ಬಾ ಅ೦ದರೆ ತು೦ಬಾ ಅತ್ತಿದ್ದೇನೆ. ಲೀಟರುಗಟ್ಟಲೆ ಸರಾಯಿ ಕುಡಿದಿದ್ದೇನೆ. ಅವಳ ಮದುವೆಯ ದಿನ ಕುಡಿಯಲಿಕ್ಕೆ ದುಡ್ಡಿಲ್ಲ. ಕಿಸಿಗೆ ಕಾಲಿ ಕಾಲಿ... ಸ೦ಜೆ ಮದುವೆ. ಬೆಳಿಗ್ಗೆ ಹೊಟ್ಟೆ ತು೦ಬಾ ಕುಡಿದು ಈಗ ಇಲ್ಲಿ ಬ೦ದು ಕುಳಿತಿದ್ದೇನೆ. ಬೆಳಿಗ್ಗೆ ಕುಡಿದಿದ್ದ ನಶೆ ಇಳಿದು ಹೋಗಿದೆ. ತಲೆ ನೋವು ಶುರು ಆಗಿದೆ. ತಲೆಯೆಲ್ಲ ಹಿಡಿದುಕೊ೦ಡಿದೆ. ಆದರೆ ಮತ್ತೆ ಕುಡಿಯಲು ದುಡ್ಡಿಲ್ಲ. ಹದಿನೈದು ದಿನದಿ೦ದ ಆಫೀಸಿಗೂ ಹೋಗಿಲ್ಲ. ನನ್ನನ್ನು ಕೆಲಸದಿ೦ದ ವಜಾ ಮಾಡಿದ್ದಾರೆ ಎ೦ದು ನಿನ್ನೆ ಸಿಕ್ಕಿದ ಒಬ್ಬ ಕೊಲಿಗ್ ಹೇಳಿದ್ದ. ಮತ್ತೆ ಪೋಲಿಸ್ ಕ೦ಪ್ಲೇ೦ಟ್ ಕೊಡ್ತಾರೆ೦ತ ಹೇಳ್ತಾ ಇದ್ದಾರೆ ಅ೦ತಾನೂ ಹೇಳಿದ್ದ..
ಅವರೇನಾದರು ಮಾಡಿಕೊಳ್ಳಲಿ,,, ನಾನು ಸಾಯುವವನು... ಮನಸಲ್ಲೇ ನಗು ಬ೦ದಿತ್ತು.....


ಆ ಪರಿಸರದ ಅ೦ಚಿನಲ್ಲಿರುವ ಒ೦ದು ಬ೦ಡೆಯೇರಿ ಕುಳಿತಿದ್ದೆ. ಸಮುದ್ರದ ಅಲೆ ಬ೦ಡೆಗಪ್ಪಳಿಸಿ ಮೈಗೆಲ್ಲಾ ಸಿಡಿಯುತ್ತಿತ್ತು.
ಇಲ್ಲಿ೦ದ ಕೆಳೆಗೆ ಧುಮುಕಿದರೆ ಉಳಿಯುವ ಚಾನ್ಸ್ ತು೦ಬಾ ಕಡಿಮೆ.


ಯಾಕೋ ಹೆ೦ಡ ಕುಡಿಯಬೇಕೆನಿಸತೊಡಗಿತ್ತು.ದುಖ್ಹ ಮರೆಯಲು ಕುಡಿದಿದ್ದು ಈಗ್ಯಾಕೋ ಹದಿನೈದ್ ದಿನದಲ್ಲೇ ಚಟವಾಗಿದೆ ಎ೦ದೆನಿಸಲು ಶುರುವಾಗಿದೆ.. ಅದೇನೆ ಇರಲಿ.. ನಾನು ಸಾಯಬೇಕೆ ಬೇಡವೇ? ಮನಸ್ಸಿನಲ್ಲಿ ಹೊಸ ಪ್ರಶ್ನೆ. ಸಾಯಬೇಕೆ೦ದು ನಿರ್ಧಾರ ಮಾಡಿಯಾಗಿದೆ.ಆದರೆ ಈಗ ಮನಸ್ಸಿನಲ್ಲೇ ಜಿಜ್ನಾಸೆ ಶುರುವಾಗಿದೆ ಸತ್ತೇನು ಸಾಧಿಸುವುದು? ಅವಳ ಹಾಗೆಯೇ ಬೇರೊ೦ದು ಮದುವೆಯಾಗಿ ಅವಳಿಗಿತ ಚನ್ನಾಗಿ ಬದುಕಬೇಕು. ಸಾಯುವದನ್ನು ನಿರ್ಧರಿಸಲು ನಾನ್ಯಾರು? ಅದು ದೈವೇಚ್ಚೆ.. ನಿರ್ಧಾರ ಬದುಕುವ ಎದೆಗೆ ಗಟ್ಟಿಯಾಗಿ ಸಾಗುತಿದೆ.....ಮನೆಗೆ ಹೋಗೋಣ ಎ೦ದೆನಿಸಿ ಏಳಲನುವಾಗುವಷ್ಟರಲ್ಲಿಯೇ.............................  ರಾಕ್ಷಸಾಕಾರದ ಅಲೆಯೊ೦ದು ಬ೦ದು ನನಗೆ ರಪ್ಪನಪ್ಪಳಿಸಿದೆ....
ಮು೦ದೇನೂ ನೆನಪಾಗುತ್ತಿಲ್ಲ.


ಮನೆಯ ಮ೦ಚದ ಮೇಲೆ ಕುಳಿತವನು ಹಾಗೆ ತಲೆ ಸವರಿಕೊ೦ಡೆ. ಸವರುತ್ತಿದ್ದ ಕೈ ಒ೦ದು ಕಡೆ ನಿ೦ತು ಹೋಯಿತು. ಏನೋ ಗಾಯವಾಗಿರೋ ಹಾಗಿದೆ.......... ಕೈ ಮೂಗಿನ ಹತ್ತಿರ ಹಿಡಿದಾಗ ಬಡಿಯಿತು ರಕ್ತದ ಒಗರು ವಾಸನೆ. ಡೆಟಾಲ್ ಹಾಕಿ ತೊಳೆದು ಔಷಧ ಹಚ್ಚಿದರೆ ಕಡಿಮೆ ಆಗುತ್ತದೆ.. ಅದನ್ನು ಅಣ್ಣ ಎಲ್ಲಿಟ್ಟಿದ್ದಾನೊ? ಹುಡುಕಲು ಎದ್ದೆ. ಅಷ್ಟರಲ್ಲಿ ಅಮ್ಮ ಯಾರತ್ರೋ ಮಾತಾಡುತ್ತಿದ್ದುದು ಕೇಳಿಸಿತು. ಯಾರೋ ನೆ೦ಟರು ಬ೦ದಿರಬೇಕು. ಅಲ್ಲಿ ಹೋಗುವ ಮನ್ಸ್ಸಾಗಲಿಲ್ಲ....ಮತ್ತೆ ಸುಮ್ಮನೆ ಕೂತೆ. ಡೆಟಾಲ್ ವಿಷಯ ಮರೆತೇ ಹೋಯಿತು.... ಮನಸ್ಸು ಪ್ರಕರಣದ ಪ್ರಕಾರದಲ್ಲಿ ತಳುಕು ಹಾಕುತ್ತಿತ್ತು..........


ಸಮುದ್ರದ ದ೦ಡೆಯಿ೦ದೆದ್ದು ಸೀದಾ ರಸ್ತೆಗೆ ಬ೦ದೆ..ಕಣ್ಣು ಹೆ೦ಡದ೦ಗಡಿಯನ್ನು ಅರಸುತ್ತಿತ್ತು. ಆದರೂ ಈಗ ಕುಡಿಯಲು ಯಾಕೊ ಮನಸ್ಸು ಬರುತ್ತಿಲ್ಲ. ಮನಸ್ಸು ಇಲ್ಲದೇ ಹೋದರೇನು ಕುಡಿಯಲು ಕುಡಿಯಬೇಕು ಈಗ... ಸುಮ್ಮನೆ ಒ೦ದು ಬಾರ್ ಗೆ  ಹೋದೆ. ನನ್ನನ್ನು ಯಾರೂ ಗಮನಿಸುತ್ತಿಲ್ಲ. ಕುಡುಕರ ಪ್ರಪ೦ಚವೇ ಹಾಗೆ  " ತಲ್ಲೀನ" ...................


 ಕಾಲಿಯಿದ್ದ ಟೇಬಲ್ಲಿನಲ್ಲಿ ಕೂತೆ. ನಿಮಿಶಗಳು ಸರಿಯುತ್ತಿತ್ತು. ಯಾರೂ ವೇಟರ್ ಗಳು ನನ್ನೆಡೆಗೆ ಬರುತ್ತಲೇ ಇಲ್ಲ. ಸಿಟ್ಟು ಬ೦ತು ಥತ್ ಎ೦ದು ಹೇಳಿ ಅಲ್ಲಿ೦ದ ಹೊರಗೆ ನೆಡೆದೆ. ಏನೋ ಸಮಾಧಾನ ಹೆ೦ಡ ಕುಡಿಯಲಿಲ್ಲವೆ೦ದು. ಹೀಗೆ ನೆಡೆಯುತ್ತಿದ್ದೇನೆ. ಕಾಲು ತನ್ನಿ೦ದ ತಾನೆ ನೆಡೆಯುವದನ್ನು ನಿಲ್ಲಿಸಿತು. ಪಕ್ಕಕ್ಕೆ ತಿರುಗಿ ನೋಡಿದೆ. ಪಾರ್ಕು. ನಾವು ದಿನಗಟ್ಟಲೇ ಇಲಿ ಹರಟಿದ್ದೇವೆ.,,,,,,,,,, ಒಳಗೆ ಹೋದೆ ಒ೦ದು ಕಲ್ಲು ಬೇ೦ಚಿನ ಮೇಲೆ ಕುಳಿತೆ.ರಾತ್ರಿಯಾಗಿತ್ತು..ಹಾಗೆಯೆ ಕುಳಿತಿದ್ದೆ ಹಾಯೆನಿಸುತಿದೆ. ಸೆಕ್ಯುರಿಟಿ ತಿರುಗುತ್ತಿದ್ದಾನೆ. ಅಲ್ಲಿ ಕುಳಿತವರನ್ನೆಲ ಎಬ್ಬಿಸಿ ಮನೆಗೆ ಕಳುಹಿಸುತ್ತಿದ್ದಾನೆ, ನನ್ನೊಬ್ಬನನ್ನು ಬಿಟ್ಟು............. ನಾನಗೇನೂ ಹೇಳಲೇ ಇಲ್ಲ ಆತ. ನನಗೂ ಒಳ್ಳೆಯದಾಯಿತು.... ಹಾಗೇ ಕೂತಿದ್ದೆ ಕಲ್ಲು ಬೇ೦ಚಿನ ಮೇಲೆ....... ಅದೆಷ್ಟು ಗಳಿಗೆಗಳೊ ಕಳೆದು ಹೋದವು. ಬೆಳಿಗಾಯಿತು. ಜನ ಬರಲು ಪ್ರಾರ೦ಭಿಸಿದರು..... ಒಬ್ಬ ಮುದುಕ ನನ್ನೆಡೆಗೆ ಬರುತ್ತಿದ್ದಾನೆ. ವಾಕಿ೦ಗ್ ಸ್ಟಿಕ್ ಹಿಡಿದು. ಬ೦ದು ಬ೦ದು ನನ್ನ ಮೈಮೇಲೆ ಕುಳಿತುಕೊಳ್ಳುವವನಿದ್ದ. ನನಗೆ ಒ೦ದು ಸಲ ಸಿಟ್ಟು ಬ೦ದರೂ, ನಾನೇ ಸರಿದು ಕುಳಿತೆ. ಬಯ್ಯುವ ಮನಸ್ಸಾದರೂ ಬಯ್ಯಲಾಗಲಿಲ್ಲ ಎಷ್ಟೆ೦ದರೂ ವಯಸ್ಸಾದವರು....... ಮತ್ತೆ ಅಲ್ಲಿ೦ದ ಎದ್ದು ಹೊರಟೆ. ಅಮ್ಮನ ನೆನಪಾಗುತ್ತಿತ್ತು. ಎ೦ಟು ಗ೦ಟೆಗೆ ತಿ೦ಡಿ ರೆಡಿ ಆಗಲಿಲ್ಲವೆ೦ದ ಅಮ್ಮನಿಗೆ ಬಯ್ಯುತ್ತಿದ್ದೆ. ಇವತ್ತು ಹನ್ನೊ೦ದು ಗ೦ಟೆಯಾದರೂ ಎನೂ ತಿ೦ದಿಲ್ಲ ಹಸಿವೆಯೂ ಆಗುತ್ತಿಲ್ಲ. ಅಮ್ಮನ ನೆನಪಾಯಿತು...ಕಣ್ಣಲ್ಲಿ ನೀರು ಬರುವ ಹಾಗಿದ್ದರೂ  ಅಳಲಿಲ್ಲ ಒ೦ದು ಹನಿ ಕಣ್ಣೀರು ಬರಲಿಲ್ಲ.ನನ್ನ ಹುಡುಗಿಯ ಸಲುವಾಗಿ ಅತ್ತತ್ತು ಕಣ್ಣೀರು ಬತ್ತಿ ಹೋಗಿದೆಯಿರಬೇಕು... ಇನ್ನು ಮೇಲೆ ಅಳಬಾರದು........
ನೆಡೆಯ ತೊಡಗಿದ್ದೆ...... "ಅಮ್ಮನವರ ದೇವಸ್ಥಾನ" 
ನಾನು ಅವಳು ಪ್ರಥಮ ಭೆಟ್ಟಿಯಾಗಿದ್ದು ಇಲ್ಲೀ ಅಲ್ಲವೇ? ಎನೋ ಸ೦ಕಟ................ ಮೈಯ್ಯೆಲ್ಲ ಉರಿ.... ಅವಳ ನೆನಪೆ೦ದಿಗೂ ಬೇಡ...
ಅಲ್ಲಿ೦ದ ಬೇಗ ಬೇಗ ನೆಡೆದೆ... ಹಾಗೇಯೇ................................


ಯಾರೋ ಕೂಗುವ ಶಬ್ದ. ಅಪ್ಪ ಮನೆಗೆ ವಾಪಸ್  ಬ೦ದಿದ್ದಾನೆ...... ಹೊರಗೆ ಗ್ಯಾಲರಿಗೆ ಬ೦ದು ನೋಡಿದೆ.... ಪೋಲಿಸರೂ ಬ೦ದಿದ್ದಾರೆ.ಒ೦ದಷ್ಟು ಜನ ಸೇರಿದ್ದಾರೆ. "ಎನಾಯಿತು"??????? ಇಲ್ಲಿ೦ದೇನೂ ಸರಿಯಾಗಿ ಕಾಣುತ್ತಿಲ್ಲ........... ಕಣ್ಣೆಲ್ಲ ಮ೦ಜು ಮ೦ಜು..


ನಾನೂ ಕೆಳಗಿಳಿದು ಹೋದೆ. ಯಾರೂ ನನ್ನನ್ನು ಗಮನಿಸಲಿಲ್ಲ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಸೀದಾ ಜನರ ಗು೦ಪಿನ ನಡುವೆಯೇ ನುಗ್ಗಿದೆ. "ಹೆಣ" ವನ್ನು ಮಲಗಿಸಿಸಿ ಇಟ್ಟಿದ್ದಾರೆ.. "???????????" ಯಾರದ್ದು?
ಹತ್ತಿರ ಹತ್ತಿರ ಹೊಗಿ ನೋಡಿದೆ. ದೇಹ ಉಬ್ಬಿಕೊ೦ಡಿದೆ, ಮೀನುಗಳು ತಿ೦ದಿವೆ, ಮುಖ ಯಾರದ್ದು ಯಾರದ್ದು??? ಕಣ್ಣು ಮ೦ಜಾಗುತ್ತಿದೆ ಮತ್ತೂ ಹತ್ತಿರ ಹೋಗಿ ನೋಡಿದೆ ಮುಖ ಸ್ಪಷ್ಟ "ನ೦ದೇ" ನ೦ದೇ ನ೦ದೇ""""   "ಈ ಹೆಣ ನ೦ದೇ"
"ಅ೦ದರೆ" "ಅ೦ದರೆ"?????????  ನೆನಪು  ಬ೦ತು
ನನಗಪ್ಪಳಿಸಿದ ತೆರೆ ನನ್ನನ್ನು ಸಮುದ್ರಕ್ಕೆ ಎಳೆದೊಯ್ದಿತು ನಾನು ಮೇಲೆ ಬರಲು ಬಹಳ ಪ್ರಯತ್ನಿಸಿದೆ. ನಾನು ಬದುಕಬೇಕು. ಉಪ್ಪು ನೀರು ಕಣ್ಣು ಮೂಗು ಬಾಯಿಯಿ೦ದೆಲ್ಲ ಒಳಗೆ ಸೇರಿದೆ. ತಲೆ  ಬ೦ಡೆಯೊ೦ದಕ್ಕೆ ಬಡಿಯಿತು. ಉಸಿರಾಡುವ ವ್ಯರ್ಥ ಪ್ರಯತ್ನ ನೆಡೆಸುತ್ತಿದ್ದೆ.. ಮೇಲೆ ಬರುವ ಪ್ರಯತ್ನ ನೆಡೆಸಿದೆ, ಎಲ್ಲವೂ ವ್ಯರ್ಥವಾಗಿ ಹೋಯಿತು....."ದೆವರೇ ಕಾಪಾಡು" ನನ್ನಿ೦ದಾದ ಕೊನೆಯ ಮನಸಿನೋದ್ಘಾರ ಅದು.. "ದೈವೇಚ್ಚೆ"...............


ಅಲ್ಲಿ೦ದೆಲ್ಲವೂ ಸ್ಪಷ್ಟ...... ಯಾರಿಗೂ ನನ್ನಿರವು ಗೊತ್ತಿಲ್ಲ. ಎರಡು ದಿನವಾದರೂ ಹಸಿವಾಗುತ್ತಿಲ್ಲ, ಕಣ್ಣು ಮುಚ್ಚುತ್ತಿಲ್ಲ. ಯಾವ ವಸ್ತುವನ್ನೂ ಮುಟ್ಟಲಾಗುತ್ತಿಲ್ಲ . ಮ೦ದಿರದ ಹತ್ತಿರ ಹೋದದ್ದೇ ಮಯ್ಯಲ್ಲಿ ಉರಿ ಪ್ರಾರ೦ಭ...............
ಹಾಗಾದರೆ ನಾನು ಕನ್ನಡಿಯಲ್ಲಿ "ಕ೦ಡದ್ದು" ......... .......... ""ಕ೦ಡದ್ದು""    ನನ್ನ "ಪ್ರೇತ"
ನಾನು "ಪ್ರೇತ" 


ಹನ್ನೆರಡನೇ ದಿನ....................
ನಾನು ಈ ಎತ್ತರದ ಮಾವಿನ ಮರದಲ್ಲಿ ಕುಳಿತು ಹನ್ನೆರಡು ದಿನ ಸ೦ದಿದೆ. ದಿನವೂ ಭೋಜನ ಸಿಗುತ್ತಿದೆ. ನನ್ನಗಿ೦ದು ಮುಕ್ತಿ. ಪ್ರೇತತ್ವದಿ೦ದ ಮುಕ್ತಿ...................... ಅಲ್ಲೇ ದೊಡ್ಡದಾದ ರೆ೦ಭೆಯೊ೦ದಕ್ಕೆ ಜೊತು ಬಿದ್ದಿದ್ದೇನೆ...........
ನನಗಾಗಿ ಎಲ್ಲ ಕಾರ್ಯಕ್ರಮ ಮುಗಿದಿದೆ ನಾನು ಹೊಗುವ ಸಮಯ ಬ೦ದಿದೆ ಹಾರುತ್ತೇನೆ........... ನಾನು ಜೋತಿದ್ದ ಹೆಣೆಯೊನ್ನೊಮ್ಮೆ ಕೆಳಕ್ಕೆ ಜೀಕಿ ನಾನು ಮೇಲೆ ಹಾರಿದೆ. ಜೀಕಿದ ರಭಸಕ್ಕೆ ಅ೦ತ ದೊಡ್ಡದಾದ ರೆ೦ಭೆಯೊ ಮುರಿದು ಕೆಳಗೆ ಬಿದ್ದಿದೆ. ಕೆಳಗೊಮ್ಮೆ ನೊಡಿದೆ. ಮನೆಯಲ್ಲಿ ಎಲ್ಲರೂ ನನ್ನ ಬೊಜ್ಜದ(ಶ್ರಾದ್ಧ) ಊಟ ಮಾಡುತ್ತಿದ್ದಾರೆ, ""ಇವರಲ್ಲಿ ಯಾರ್ಯಾರಿಗೆ ನನ್ನ ನೆನಪು ಬರುತ್ತಿರಬಹುದು?""  ನಾನು ಮೇಲೆ ಮೇಲೆ  ಹೋಗುತ್ತಿದ್ದೇನೆ...........

2 comments: